ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ; ‘2047ರ ಅಭಿವೃದ್ಧಿ ಹೊಂದಿದ ಭಾರತಕ್ಕೆ ಯುವಕರ ಪಾತ್ರ ನಿರ್ಣಾಯಕ’ ಎಂದ ಮೋದಿ

ನವದೆಹಲಿ: ದೇಶದಲ್ಲಿ ಹಬ್ಬದ ಸಂಭ್ರಮ ಆರಂಭವಾಗಿರುವ ಬೆನ್ನಲ್ಲೇ, 20ನೇ ರಾಷ್ಟ್ರೀಯ ಉದ್ಯೋಗ ಮೇಳದಲ್ಲಿ 51,000ಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಸೇವೆಯ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ವಿತರಿಸಿದ್ದಾರೆ.

ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡ ಯುವ ಉದ್ಯೋಗಿಗಳನ್ನು ಪ್ರಧಾನಿ ಅಭಿನಂದಿಸಿದರು.

ನೇಮಕಾತಿ ಪತ್ರ ಪಡೆದಿರುವ ಯುವಕರು 2047ರ ವೇಳೆಗೆ 'ಅಭಿವೃದ್ಧಿ ಹೊಂದಿದ ಭಾರತ' (Viksit Bharat) ನಿರ್ಮಾಣದ ಗುರಿಯತ್ತ ಸಾಗುತ್ತಿರುವ ಮಹತ್ವದ ಸಂದರ್ಭದಲ್ಲಿ ಭಾರತ ಸರ್ಕಾರದ ಸೇವೆಗೆ ಸೇರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭಾರತ ನಿರ್ಮಾಣದ ಪ್ರಯತ್ನಗಳನ್ನು ಬಲಪಡಿಸುವ ರೀತಿಯಲ್ಲಿ, ಸರ್ಕಾರಿ ಸೇವೆಯಲ್ಲಿ ಪ್ರತಿ ಹಂತದಲ್ಲೂ ಪ್ರತಿಯೊಂದು ನಿರ್ಧಾರವನ್ನು ಕೈಗೊಳ್ಳುವಂತೆ ಅವರು ನೂತನ ಉದ್ಯೋಗಿಗಳಿಗೆ ಕರೆ ನೀಡಿದರು.

ಈ ಸಾಧನೆಯ ಹಿಂದೆ ಯುವಕರ ಪರಿಶ್ರಮದ ಜತೆಗೆ ಅವರ ಪೋಷಕರು ಹಾಗೂ ಕುಟುಂಬ ಸದಸ್ಯರ ಸಮರ್ಪಣೆ ಮತ್ತು ತ್ಯಾಗವೂ ಅಡಗಿದೆ ಎಂದು ಮೋದಿ ಸ್ಮರಿಸಿದರು.

ಹೊಸದಾಗಿ ಸರ್ಕಾರಿ ಸೇವೆಗೆ ಸೇರುತ್ತಿರುವ ಯುವಕರಿಗೆ ಶುಭ ಹಾರೈಸಿದ ಅವರು, ಸಾರ್ವಜನಿಕ ಸೇವೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ನಾಗರಿಕರಿಗೆ ಮೊದಲ ಆದ್ಯತೆ ನೀಡುವ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.

ದೇಶದ 45 ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದ್ದ ಈ 20ನೇ ಉದ್ಯೋಗ ಮೇಳದೊಂದಿಗೆ, ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ನೇಮಕಾತಿ ಪತ್ರ ಪಡೆದವರ ಒಟ್ಟು ಸಂಖ್ಯೆ ಸುಮಾರು 12.75 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Edited By :
PublicNext

PublicNext

19/09/2026 09:45 pm

Cinque Terre

6.75 K

Cinque Terre

2

ಸಂಬಂಧಿತ ಸುದ್ದಿ