ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹನಿಮೂನ್ ಖುಷಿಯಲ್ಲೇ ದುರಂತ; ಬಾರ್ಬಿಕ್ಯೂ ವೇಳೆ ನವವಿವಾಹಿತೆಗೆ ಬೆಂಕಿ, ಗಂಭೀರ ಗಾಯ!

ದಾರ್ಜಿಲಿಂಗ್: ಪಶ್ಚಿಮ ಬಂಗಾಳದ ನವವಿವಾಹಿತ ದಂಪತಿಯ ಹನಿಮೂನ್ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ದಾರ್ಜಿಲಿಂಗ್‌ನ ಸಿಟ್ಟಾಂಗ್‌ನಲ್ಲಿರುವ ಹೋಂಸ್ಟೇಯಲ್ಲಿ ಬಾರ್ಬಿಕ್ಯೂ ನಡೆಸುತ್ತಿದ್ದ ವೇಳೆ ಮಹಿಳೆಯೊಬ್ಬರು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.

ಗಾಯಗೊಂಡ ಮಹಿಳೆಯನ್ನು ನಿಖಿತಾ ಎಂದು ಗುರುತಿಸಲಾಗಿದ್ದು, ಸದ್ಯ ಸಿಲಿಗುರಿಯ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹೋಂಸ್ಟೇ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ನಡುವೆ, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಹನಿಮೂನ್ ಪ್ರವಾಸದ ವೇಳೆ ನಡೆದ ಈ ಘಟನೆ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Edited By :
PublicNext

PublicNext

18/09/2026 09:18 pm

Cinque Terre

17.84 K

Cinque Terre

0

ಸಂಬಂಧಿತ ಸುದ್ದಿ