ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಗಾಲಿ ಜನಾರ್ದನ ರೆಡ್ಡಿ, ಬಿಜೆಪಿ ಮುಖಂಡ ಸಂಗಮೇಶ್ ನಡುವಿನ ಜಿದ್ದು, ಕಾರ್ಯಕರ್ತರ ಮಧ್ಯೆ ಬಣ ಬಡಿದಾಟ

ಕೊಪ್ಪಳ: ಬಿಜೆಪಿ ವತಿಯಿಂದ ಬಳ್ಳಾರಿ ಚಲೋ ಹಮ್ಮಿಕೊಳ್ಳಲಾಗಿದೆ. ಆದ್ರೆ ಬಿಜೆಪಿ ಪಾದಯಾತ್ರೆ ಕಾರಟಗಿಯಿಂದ ಗಂಗಾವತಿಗೆ ಬರುವುದಕ್ಕೂ ಮೊದಲು ಗಂಗಾವತಿ ತಾಲೂಕಿನಲ್ಲಿ ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವಾ ಅನ್ನೋರು ಹಾಕಿದ್ದ ಬ್ಯಾನರ್‌ಗಳ ಮೇಲೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಬ್ಯಾನರ್ ಅಭಿಮಾನಿಗಳು ಅಳವಡಿಸಿದ್ದಕ್ಕೆ ಭಾರೀ ಗಲಾಟೆ ಉಂಟಾಗಿದೆ.

ಗಂಗಾವತಿ ನಗರದ ಬಸ್ ನಿಲ್ದಾಣ ರಸ್ತೆಯಲ್ಲಿ ಬಿಜೆಪಿ ಮುಖಂಡ ಸಂಗಮೇಶ್ ಸುಗ್ರೀವಾ ಅನ್ನೋರು ಸ್ಥಳೀಯ ಆಡಳಿತದ ಅನುಮತಿ ಪಡೆದೇ ಪಾದಯಾತ್ರೆಯ ಶುಭಾಶಯ ಬ್ಯಾನರ್‌ ಹಾಕಲಾಗಿತ್ತು. ಆದ್ರೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅನುಮತಿ ಪಡೆದು ಹಾಕಿದ್ದ ಬ್ಯಾನರ್‌ಗಳ ಮೇಲೆ ಬ್ಯಾನರ್‌ ಹಾಕಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು ಬ್ಯಾನರ್ ವಿಚಾರವಾಗಿ ಭಾರೀ ಹೈಡ್ರಾಮಾ ನಡೆದುಹೋಗಿದೆ. ಒಬ್ಬ ಶಾಸಕ ಇನ್ನೊಬ್ಬ ಮುಖಂಡನ ನಡುವಿನ ರಾಜಕೀಯ ಜಿದ್ದು ಕಾರ್ಯಕರ್ತರ ನಡುವೆ ವೈಮನಸ್ಸು ಉಂಟುಮಾಡುತ್ತದೆ. ಇದು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಹಾದಿ ಮಾಡಿಕೊಡುತ್ತದೆ. ಇದು ಶಾಸಕ ಜನಾರ್ದನ ರೆಡ್ಡಿ ಅವರ ಗಮನಕ್ಕೆ ಇರುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ಶಾಸಕರ ಆಪ್ತರು ಈ ರೀತಿ ಮಾಡಬಾರದು ಎಂದು ಸುಗ್ರೀವಾ ಜನಸೇವಾ ಸಮಿತಿ ಕಾರ್ಯದರ್ಶಿ ರವಿಕುಮಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

06/09/2026 09:22 am

Cinque Terre

8.81 K

Cinque Terre

0

ಸಂಬಂಧಿತ ಸುದ್ದಿ