ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಿಗಾಗಿ ಮೇವು : ಗೋಸೇವೆಗೆ ಕೈಜೋಡಿಸಿದ ಕುಕ್ಕುಂದೂರು ಫ್ರೆಂಡ್ಸ್

ಕಾರ್ಕಳ : ಬ್ರಿಗೇಡ್ ಆಯೋಜಿಸಿದ “ಗೋವಿಗಾಗಿ ಮೇವು” ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.), ಕುಕ್ಕುಂದೂರು–ಮುಂಬೈ ಸಂಘದ ಸದಸ್ಯರು ಪಾಲ್ಗೊಂಡು, ದಿನಾಂಕ 06-09-2026ರಂದು ಕುಕ್ಕುಂದೂರು ತೋಟಗಾರಿಕೆ ಇಲಾಖೆಯ ತೋಟದಲ್ಲಿ ಹುಲ್ಲು ಕಟಾವು ಮಾಡಿ ಗೋಶಾಲೆಗೆ ನೀಡುವ ಮೂಲಕ ಗೋಸೇವೆಗೆ ಅರ್ಥಪೂರ್ಣವಾಗಿ ಕೈಜೋಡಿಸಿದರು.

ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಸದಸ್ಯರೊಂದಿಗೆ ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಶ್ರಮದಾನದಲ್ಲಿ ತೊಡಗಿಸಿಕೊಂಡು ಹುಲ್ಲು ಕಟಾವು ಮಾಡಿ ಸಂಗ್ರಹಿಸಿ, ಒಂದು ಲೋಡು ಮೇವನ್ನು ಹೆಬ್ರಿಯ ಗೋಶಾಲೆಗೆ ಸಾಗಿಸಲಾಯಿತು.

“ಗೋಸೇವೆ ಎನ್ನುವುದು ಕೇವಲ ಧಾರ್ಮಿಕ ಕಾರ್ಯವಲ್ಲ. ಅದು ಜೀವಿಗಳ ಮೇಲಿನ ಕರುಣೆ, ಪ್ರೀತಿ ಮತ್ತು ಮಾನವೀಯತೆಯ ಪ್ರತೀಕ” ಎಂಬ ಆಶಯದೊಂದಿಗೆ ನಡೆದ ಈ ಸೇವಾ ಕಾರ್ಯವು ಪರಿಸರ ಹಾಗೂ ಜೀವ ಸಂರಕ್ಷಣೆಯ ಮಹತ್ವವನ್ನೂ ಸಾರಿತು.

ಕುಕ್ಕುಂದೂರು ಫ್ರೆಂಡ್ಸ್ ಸಂಘದ ಸದಸ್ಯರು ಸಾಮಾಜಿಕ ಹಾಗೂ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಪ್ರತಿ ವರ್ಷ ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರೊಂದಿಗೆ ಸೇರಿ ಗೋಸೇವೆಯ ಮೂಲಕವೂ ‘ಸೇವೆಯೇ ಶ್ರೇಷ್ಠ’ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.

ವರದಿ : ಮಂಜು ಶೆಟ್ಟಿ ಸಾಣೂರು, ಪಬ್ಲಿಕ್ ನೆಕ್ಸ್ಟ್, ಕಾರ್ಕಳ

Edited By :
PublicNext

PublicNext

06/09/2026 12:33 pm

Cinque Terre

10.94 K

Cinque Terre

0

ಸಂಬಂಧಿತ ಸುದ್ದಿ