ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಬಿಜೆಪಿ ಅವರು ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ರಾಜಿನಾಮೆ ನೀಡ್ತೆನೆ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : B.Y ವಿಜಯೇಂದ್ರ , R. ಅಶೋಕ್ ವಂದೇ ಮಾತರಂ ನೋಡದೆ ಪೂರ್ತಿ ಹಾಡಿದ್ರೆ ನಾನು ರಾಜೀನಾಮೆ ನೀಡ್ತೆನೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಮಾತನಾಡಿ ವಂದೇ ಮಾತರಂ ಎರಡು ಚರಣ ಹಾಡಲು ಸರ್ಕಾರ ನಿರ್ಣಯ ಮಾಡಿತು, ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದೆ. ಬಿಜೆಪಿಯವರಿಗೆ ಹೋರಾಟ ಮಾಡಲು ಯಾವ ವಿಷಯ ಇಲ್ಲ ಹಾಗಾಗಿ ವಂದೇ ಮಾತರಂ ಗೀತೆಯ ಬಗ್ಗೆ ಹೋರಾಟ ಮಾಡಲು ಹೊರಟಿದ್ದಾರೆ. ವಿಜಯೇಂದ್ರ ಹಾಗೂ ಅಶೋಕ್‌ ಅವರು ಯಾವುದೇ ಪೇಪರ್‌, ಟೆಲಿ ಪ್ರಾಂಪ್ಟರ್‌ ಬಳಸಿಕೊಳ್ಳದೆ ನಾಲ್ಕು ಚರಣ ತಕ್ಷಣ ಹಾಡಿ ತೋರಿಸಲಿ. ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದುರು.

ಇನ್ನು ಬಿಜೆಪಿ ಶಾಸಕರಿಗೂ ಕೂಡ ವಿಧಾನ ಸಭೆಯಲ್ಲಿ ಪ್ರತ್ಯೇಕವಾಗಿ ವಂದೇ ಮಾತರಂ ಹಾಡಲು ಅನುವು ಮಾಡಿಕೊಂಡುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಅವೆರಲ್ಲರೂ ಕೂಡ ಕಂಠ ಪಾಠ ಮಾಡಿ ಹಾಡಲಿ ಎಂದ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

Edited By : PublicNext Desk
Kshetra Samachara

Kshetra Samachara

16/09/2026 07:14 am

Cinque Terre

420

Cinque Terre

0

ಸಂಬಂಧಿತ ಸುದ್ದಿ