ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: 35 ವರ್ಷಗಳಿಂದ 1,000ಕ್ಕೂ ಹೆಚ್ಚು ಉಚಿತ ಅಂತ್ಯಸಂಸ್ಕಾರ - ಬನ್ನಾಡಿ ಕೃಷ್ಣಯ್ಯ ಆಚಾರ್ಯ ನಿಸ್ವಾರ್ಥ ಸೇವೆ

ಬ್ರಹ್ಮಾವರ: ಸಮಾಜ ಸೇವೆಗೆ ನಿಸ್ವಾರ್ಥ ಮನಸ್ಸಿದ್ದರೆ ಸಾಕು ಎಂಬುದಕ್ಕೆ ಬನ್ನಾಡಿಯ 58 ವರ್ಷದ ಕೃಷ್ಣಯ್ಯ ಆಚಾರ್ಯ ಅತ್ಯುತ್ತಮ ಉದಾಹರಣೆ. ಶವ ಎಂದರೆ ದೂರ ನಿಲ್ಲುವವರ ಮಧ್ಯೆ, ಕಳೆದ 35 ವರ್ಷಗಳಿಂದ ಸುತ್ತಮುತ್ತ ಪರಿಸರದಲ್ಲಿ ಯಾರೇ ನಿಧನ ಹೊಂದಿದರೂ ಅವರ ಅಂತ್ಯಸಂಸ್ಕಾರ ಹಾಗೂ ದಹನ ಕಾರ್ಯವನ್ನು ಸನಾತನ ಸಂಪ್ರದಾಯದಂತೆ ಉಚಿತವಾಗಿ ಮಾಡುತ್ತಾ ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಬನ್ನಾಡಿಯ ಮಂಜುನಾಥ ಆಚಾರ್ಯರ ಪುತ್ರರಾದ ಇವರು ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಪಡೆದಿರುವ ಕೃಷ್ಣಯ್ಯ, ಸುತ್ತಮುತ್ತ ಯಾರಾದರೂ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ವತಃ ಸ್ಥಳಕ್ಕೆ ಧಾವಿಸುತ್ತಾರೆ. ಶವವನ್ನು ಇರಿಸುವ ಚೆಟ್ಟ ಸಿದ್ಧಪಡಿಸುವುದರಿಂದ ಹಿಡಿದು, ಮೃತದೇಹಕ್ಕೆ ಸ್ನಾನ ಮಾಡಿಸಿ, ಧಾರ್ಮಿಕ ವಿಧಿವಿಧಾನಗಳಂತೆ ಶೃಂಗರಿಸಿ, ಅಂತಿಮ ದಹನ ಕಾರ್ಯದವರೆಗೆ ಸಂಪೂರ್ಣ ಜವಾಬ್ದಾರಿಯನ್ನು ಗೌರವಯುತವಾಗಿ ನಿರ್ವಹಿಸುತ್ತಾರೆ.

ಬಡಗಿ ವೃತ್ತಿಯಿಂದ ಬದುಕು ಸಾಗಿಸುತ್ತಿರುವ ಇವರು, ಯಾವುದೇ ಹಣದ ಅಪೇಕ್ಷೆಯಿಲ್ಲದೆ ಇದುವರೆಗೆ 1000 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಜಾತಿ-ಮತದ ಭೇದವಿಲ್ಲದೆ ಸೇವೆ ಸಲ್ಲಿಸುತ್ತಿರುವ ಇಂತಹ ನಿಸ್ವಾರ್ಥ ಸೇವಕನನ್ನು ಸಮಾಜ ಹಾಗೂ ಸರ್ಕಾರ ಸೂಕ್ತವಾಗಿ ಗುರುತಿಸಿ ಗೌರವಿಸಬೇಕಾಗಿದೆ.

ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ

Edited By :
PublicNext

PublicNext

16/09/2026 06:09 pm

Cinque Terre

8.75 K

Cinque Terre

0

ಸಂಬಂಧಿತ ಸುದ್ದಿ