ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಗೌರಸಮುದ್ರ ಮಾರಮ್ಮ ದೇಗುಲದ ಸಿಡಿ ಉತ್ಸವಕ್ಕೆ ವಿಘ್ನ; ಮುರಿದುಬಿದ್ದ ಸಿಡಿಮರದಿಂದ ಭಕ್ತರಲ್ಲಿ ಆತಂಕ!

ಚಳ್ಳಕೆರೆ: ತಾಲೂಕಿನ ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದ ಗೌರ ಸಮುದ್ರ ಗ್ರಾಮದಲ್ಲಿ ನೆಲೆಸಿರುವ ಮಧ್ಯ ಕರ್ನಾಟಕ ಭಾಗದ ಸುಪ್ರಸಿದ್ಧ ಶಕ್ತಿ ದೇವತೆಯಾದ ಗೌರಸಮುದ್ರ ಗ್ರಾಮದ ಶ್ರೀ ಮಾರಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ನಡೆಯಬೇಕಿದ್ದ ಸಿಡಿ ಉತ್ಸವಕ್ಕೆ ಸಿಡಿಮರದ ತುಂಡು ಮುರಿದು ಬಿದ್ದ ಪರಿಣಾಮ ವಿಘ್ನ ಎದುರಾಗಿ ಭಕ್ತರಲ್ಲಿ ಆತಂಕ ಮೂಡಿದೆ .

ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಕೋನಸಾಗರ ಗ್ರಾಮದ ಭಕ್ತರು ಬರಿಗಾಲಿನಲ್ಲಿ ನಡೆದುಕೊಂಡು ಗೌರಸಮುದ್ರಕ್ಕೆ ಆಗಮಿಸಿದ್ದರು. ಸಂಜೆ 4 ಗಂಟೆಗೆ ಉತ್ಸವ ಆರಂಭವಾಗಬೇಕಿದ್ದ ಸಂದರ್ಭದಲ್ಲೇ ಸಿಡಿಮರದ ಒಂದು ತುಂಡು ಮುರಿದು ಬಿದ್ದಿದೆ. ಇದರಿಂದ ಸ್ಥಳದಲ್ಲಿದ್ದ ಭಕ್ತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಬಳಿಕ ಸಿಡಿಮರವನ್ನು ಮತ್ತೊಮ್ಮೆ ಸರಿಪಡಿಸಿ ಕಟ್ಟುವ ಪ್ರಯತ್ನ ನಡೆಸಲಾಯಿತು. ಆದರೆ ಈ ವೇಳೆ ಮತ್ತೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಉತ್ಸವದ ಮುಂದಿನ ಕ್ರಮದ ಬಗ್ಗೆ ಭಕ್ತರಲ್ಲಿ ಗೊಂದಲ ಮೂಡಿದೆ.

ಗೌರಸಮುದ್ರ ಮಾರಮ್ಮದೇವಿಯ ಜಾತ್ರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಿಡಿಮರ ತುಂಡಾಗಿ ಉತ್ಸವಕ್ಕೆ ವಿಘ್ನ ಉಂಟಾಗಿದೆ ಎಂದು ಗ್ರಾಮದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಇದೀಗ ಸಿಡಿಮರವನ್ನು ಸುರಕ್ಷಿತವಾಗಿ ಸರಿಪಡಿಸಿ ಸಿಡಿ ಉತ್ಸವ ಮುಂದುವರಿಸಲಾಗುತ್ತದೆಯೇ ಅಥವಾ ತಾತ್ಕಾಲಿಕವಾಗಿ ಉತ್ಸವಕ್ಕೆ ತಡೆ ನೀಡಲಾಗುತ್ತದೆಯೇ ಎಂಬುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ.

Edited By :
Kshetra Samachara

Kshetra Samachara

16/09/2026 09:28 pm

Cinque Terre

1.82 K

Cinque Terre

0