ಶಿಡ್ಲಘಟ್ಟ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 86ನೇ ಹುಟ್ಟು ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಶ್ರೀ ಸೋಮೇಶ್ವರ ದೇವಾಲಯದಲ್ಲಿ 10 ಸಾವಿರ ದೀಪ ಬೆಳಗಿಸುವ ಮೂಲಕ ವಿಶೇಷವಾಗಿ ಹುಟ್ಟುಹಬ್ಬ ಆಚರಣೆ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 10 ಸಾವಿರ ದೀಪಗಳನ್ನ ಬೆಳಗಿಸುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಿಗೆ ದೇವರು ಇನ್ನಷ್ಟು ಶಕ್ತಿ, ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡಲಿ. ದೇಶದ ಅಭಿವೃದ್ಧಿಗಾಗಿ ಅವರು ಇನ್ನಷ್ಟು ಸೇವೆ ಸಲ್ಲಿಸುವಂತಾಗಲಿ ಎಂದು ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸಿದರು. ವಾಜಪೇಯಿ ಅವರ ದೂರದೃಷ್ಟಿ ಹಾಗೂ ಅವರ ಆಶೀರ್ವಾದದಿಂದ ನರೇಂದ್ರ ಮೋದಿ ನಂದಾದೀಪವಾಗಿ ಬೆಳೆದು ಭಾರತದಲ್ಲಿ ಸತತವಾಗಿ ಇಪ್ಪತ್ತೈದು ವರ್ಷದಲ್ಲಿ ಮೂರು ಬಾರಿ ಪ್ರಧಾನಿ ಹಾಗೂ ಗುಜರಾತ್‌ನಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಸುದೀರ್ಘವಾದ ಆಡಳಿತವನ್ನು ನೀಡಿದ್ದಾರೆ. ಇಂದು ವಿಶ್ವನಾಯಕನಾಗಿ ಇಡೀ ಜಗತ್ತಿಗೆ ಸಂದೇಶವನ್ನು ನೀಡುವಂತೆ ಬೆಳೆದಿದ್ದಾರೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
18/09/2026 12:46 pm
LOADING...