ವಿಜಯಪುರ: ಸಚಿವ ಡಾ. ಎಂ.ಬಿ. ಪಾಟೀಲರೊಂದಿಗೆ ಈ ಹಿಂದೆಯೂ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ, ಮುಂದೆಯೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ಪ್ರಮಾಣನ ಸಂಸ್ಥೆಯ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಅವರು ಅರಕೇರಿಯ ಶ್ರೀ ಅಮೋಘಸಿದ್ದೇಶ್ವರನ ಸನ್ನಿಧಿಯಲ್ಲಿ ಪವಿತ್ರ ಭಂಡಾರವನ್ನು ಮುಟ್ಟಿ ಪ್ರಮಾಣ ಮಾಡಿದರು.
ಬೆಳಿಗ್ಗೆಯೇ ತಮ್ಮ ಬೆಂಬಲಿಗರೊಂದಿಗೆ ಅರಕೇರಿಯ ಶ್ರೀ ಅಮೋಘ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜುಗೌಡ ಪಾಟೀಲರು, ದೇವಸ್ಥಾನದಲ್ಲಿಯೇ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ಬಳಿಕ ದೇವಾಲಯದ ಸನ್ನಿಧಿಯಲ್ಲಿ ಪವಿತ್ರ ಭಂಡಾರವನ್ನು ಮುಟ್ಟಿ, ಸಚಿವ ಎಂ.ಬಿ. ಪಾಟೀಲರೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಪ್ರಮಾಣ ಮಾಡಿದರು.
ನಂತರ ಮಾತನಾಡಿದ ಅವರು, ನಾನು ಹೊಂದಾಣಿಕೆ ಮಾಡಿ ಕೊಂಡಿಲ್ಲ ಎಂಬುದನ್ನು ಸತ್ಯದೇವರಾದ ಶ್ರೀ ಅಮೋಘ ಸಿದ್ದೇಶ್ವರನ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ಸ್ಪಷ್ಟಪಡಿಸಿದ್ದೇನೆ. ನನ್ನ ವಿರುದ್ಧ ಹೊಂದಾಣಿಕೆ ಆರೋಪ ಮಾಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯಿಂದ ನನಗೆ ನೋವಾಗಿದೆ ಎಂದರು.
PublicNext
19/09/2026 11:21 am
LOADING...