ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆಯಲ್ಲಿ ಕುಡಿದ ಮತ್ತಿನಲ್ಲಿ ಪ್ರಿಯಕರನ ಹತ್ಯೆ ; ಮಹಿಳೆ ಅರೆಸ್ಟ್

ದಾವಣಗೆರೆ : ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬಳು ತನ್ನೊಂದಿಗೆ ವಾಸವಿದ್ದ ಪ್ರಿಯಕರನ ಕತ್ತಿಗೆ ಸೀರೆ ಬಿಗಿದು ಹತ್ಯೆ ಮಾಡಿರುವ ಘಟನೆ ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ.

ಮೃತನನ್ನು ಮಂಜಪ್ಪ (40) ಎಂದು ಗುರುತಿಸಲಾಗಿದೆ. ಶಬೀನಾ (38) ಕೊಲೆ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹದಡಿ ಠಾಣೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಮಂಜಪ್ಪ ಪತ್ನಿ ಹಾಗೂ ಮಕ್ಕಳಿಂದ ದೂರವಾಗಿ ಜೀವನ ನಡೆಸುತ್ತಿದ್ದ. ಕಳೆದ ಆರು ವರ್ಷಗಳಿಂದ ವಿಚ್ಛೇದಿತೆಯಾಗಿರುವ ಶಬೀನಾ ಜೊತೆ ಆತ ವಾಸವಾಗಿದ್ದ ಎನ್ನಲಾಗಿದೆ. ಮದ್ಯ ಸೇವಿಸಿದ ಬಳಿಕ ನಡೆದ ಘಟನೆಯಲ್ಲಿ ಶಬೀನಾ ಸೀರೆಯಿಂದ ಮಂಜಪ್ಪನ ಕತ್ತು ಬಿಗಿದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಹದಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹತ್ಯೆಗೆ ಕಾರಣ ಸೇರಿದಂತೆ ಪ್ರಕರಣದ ಇತರೆ ಅಂಶಗಳ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Edited By :
PublicNext

PublicNext

19/09/2026 12:49 pm

Cinque Terre

5.44 K

Cinque Terre

0