ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ: ಕುಟುಂಬದೊಂದಿಗೆ ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಪಾಲ್ಗೊಂಡ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್

ಮುಂಬೈ: ದೇಶದೆಲ್ಲೆಡೆ ಗಣಪತಿ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಗುತ್ತಿದ್ದು, ಭಕ್ತರು ಗಣೇಶನ ಮೂರ್ತಿಯನ್ನು ವಿಧಿ-ವಿಧಾನಗಳೊಂದಿಗೆ ವಿಸರ್ಜಿಸುತ್ತಿದ್ದಾರೆ. ಅದರಂತೆ, ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯದಲ್ಲಿ ಅತ್ಯಂತ ಭಕ್ತಿಯಿಂದ ಭಾಗಿಯಾಗಿದ್ದಾರೆ.

ಕುಟುಂಬ ವರ್ಗದೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಿಸಿದ ಸುಂದರ ಹಾಗೂ ಭಾವನಾತ್ಮಕ ಕ್ಷಣಗಳ ವೀಡಿಯೊವನ್ನು ಸಚಿನ್ ತೆಂಡೂಲ್ಕರ್ ತಮ್ಮ 'ಎಕ್ಸ್' (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಹಂಚಿಕೊಳ್ಳುವುದರ ಜೊತೆಗೆ, “ಗಣಪತಿ ಬಪ್ಪಾ ಮೋರಿಯಾ, ಮುಂದಿನ ವರ್ಷ ಬೇಗ ಬನ್ನಿ!” ಎಂದು ಬರೆದುಕೊಂಡು ಭಪ್ಪಾಗೆ ನಮನ ಸಲ್ಲಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಹಂಚಿಕೊಂಡಿರುವ ಈ ಸರಳ ಹಾಗೂ ಭಕ್ತಿಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Edited By :
PublicNext

PublicNext

19/09/2026 09:07 pm

Cinque Terre

8.53 K

Cinque Terre

1

ಸಂಬಂಧಿತ ಸುದ್ದಿ