ಕುಂದಗೋಳ: ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ’ ಜನಸಂಪರ್ಕ ಸಭೆಯಲ್ಲಿ ಸಚಿವ ಸಂತೋಷ ಲಾಡ್ 147ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ರೈತರ ಜಮೀನಿನ ದಾರಿಗೆ ಜೆಸಿಬಿ ಬಳಕೆಗೆ ಸೂಚಿಸಿದ ಅವರು, ಪಶುಪತಿಹಾಳ ಕೆರೆ ಕಾಮಗಾರಿ ಹಾಗೂ ಘನತ್ಯಾಜ್ಯ ಘಟಕ ದುರಸ್ತಿಗೆ ಇಒಗೆ ತಾಕೀತು ಮಾಡಿದರು. ಸ್ಥಗಿತಗೊಂಡ 2,900 ಮಾಸಾಶನ ಅರ್ಜಿಗಳನ್ನು 2 ದಿನದಲ್ಲಿ ವಿಲೇವಾರಿಗೆ ಉಪತಹಶೀಲ್ದಾರ್‌ಗೆ ತರಾಟೆಗೆ ತೆಗೆದುಕೊಂಡರು.
ಕಮಡೊಳ್ಳಿಯ ಅನಾಥ ಅಂಗವಿಕಲ ಯುವಕನಿಗೆ ವೈಯಕ್ತಿಕ ನೆರವು ನೀಡುವುದಾಗಿ ಅಭಯ ನೀಡಿದ ಸಚಿವರು, ಸೈನಿಕ ಕುಟುಂಬದ ಯುವತಿಯ ಉದ್ಯೋಗ ಸಮಸ್ಯೆಗೆ ತಕ್ಷಣವೇ ಚಿಕ್ಕೋಡಿ ಅಧಿಕಾರಿಗೆ ಕರೆ ಮಾಡಿ ಪರಿಹರಿಸಿದರು.
ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ರೈತರನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕ ಎಂ.ಆರ್. ಪಾಟೀಲ, ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೇರಿದಂತೆ ಹಲವರು ಭಾಗವಹಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2026 08:29 am
LOADING...