ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಬಿಜೆಪಿಯಿಂದ ಜನರನ್ನು ಎತ್ತಿಕಟ್ಟುವ ಕೆಲಸ

ಚಾಮರಾಜನಗರ : ಕೆರೆಗಳಿಗೆ ನೀರು ತುಂಬಿಸುವುದಿಲ್ಲ ಎಂದು ನಾವು ಹೇಳಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಿರುವ ಉದ್ದೇಶವೇ ರೈತರಿಗಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಸ್ಪಷ್ಟಪಡಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಹಂತ ಹಂತವಾಗಿ ಒಟ್ಟಾರೆ ನಾಲ್ಕು ಹಂತಗಳಲ್ಲಿ ನೀರು ತುಂಬಿಸುವ ಕಾರ್ಯ ನಡೆಯುತ್ತಿದೆ. ಆದರೆ ಬಿಜೆಪಿಯವರು ಮೂರನೇ ಹಂತದಲ್ಲಿ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಡ ತಂದು ಪ್ರತಿಭಟನೆ ಮಾಡಿದರು. ಬಿಜೆಪಿಯವರು ಮನಸಿಗೆ ಬಂದಂತೆ ಒಂದು ಬಾರಿ ಮೂರನೇ ಹಂತಕ್ಕೆ ನೀರು ಬಿಡಲು ಒತ್ತಡ ತರುತ್ತಾರೆ, ಮತ್ತೊಂದು ಬಾರಿ ನಾಲ್ಕನೇ ಹಂತಕ್ಕೆ ನೀರು ಬಿಡುವಂತೆ ಒತ್ತಡ ತರುತ್ತಿದ್ದಾರೆ. ಇವರೇ ಈ ರೀತಿ ಮಾಡಿದರೆ ನೀರು ತುಂಬಿಸಲು ಇಲಾಖೆ ಇರುವುದು ಯಾಕೆ ಎಂದು ಪ್ರಶ್ನಿಸಿದರು.

ಹಂತ ಹಂತವಾಗಿ ಮೊದಲನೇ, ಎರಡನೇ, ಮೂರನೇ ಹಾಗೂ ನಾಲ್ಕನೇ ಹಂತಕ್ಕೆ ನೀರು ಹರಿಸಿದರೆ ಯಾರು ಬೇಡ ಎನ್ನುತ್ತಾರೆ. ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಬಿಜೆಪಿಯವರಿಂದ ಜನರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ ಎಂದರು.

Edited By : PublicNext Desk
PublicNext

PublicNext

20/09/2026 01:09 pm

Cinque Terre

1.39 K

Cinque Terre

0

ಸಂಬಂಧಿತ ಸುದ್ದಿ