ಚಾಮರಾಜನಗರ : ಸಾಲದ ಹೊರೆ ಹಾಗೂ ಬೆಳೆಯಲ್ಲಿ ಅನುಭವಿಸಿದ ಭಾರಿ ನಷ್ಟಕ್ಕೆ ಮನನೊಂದು ಯುವ ರೈತನೊಬ್ಬ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುಃಖಕರ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಮಣಿಕಂಠ (24) ಮೃತಪಟ್ಟ ದುರ್ದೈವಿ.
ಬ್ಯಾಂಕ್, ಮೈಕ್ರೋಫೈನಾನ್ಸ್ ಹಾಗೂ ಖಾಸಗಿಯಾಗಿ ಸುಮಾರು ₹15ರಿಂದ ₹16 ಲಕ್ಷ ಸಾಲ ಮಾಡಿಕೊಂಡಿದ್ದ ಮಣಿಕಂಠ, ತಮ್ಮ ಜಮೀನಿನಲ್ಲಿ ಬೆಳ್ಳುಳ್ಳಿ, ಆಲೂಗೆಡ್ಡೆ ಮತ್ತು ಬೀಟ್‌ರೂಟ್ ಬೆಳೆದಿದ್ದರು. ಆದರೆ ಬೆಳೆ ಕೈಕೊಟ್ಟು ತೀವ್ರ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಮನನೊಂದು ತಮ್ಮ ಜಮೀನಿನಲ್ಲಿ ಕಳೆನಾಶಕ ಸೇವಿಸಿದ್ದರು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
20/09/2026 11:58 am
LOADING...