ಬಳ್ಳಾರಿ: ನಗರದ ಮನೆ ಹಾಗೂ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸರು ಆರೋಪಿ ರಾಜೇಶ್ ನಾಯ್ಕ್ (22) ಎಂಬಾತನನ್ನು ಬಂಧಿಸಿ, ಒಟ್ಟು 2.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕಪ್ಪಗಲ್ಲು ರಸ್ತೆಯ ಎಸ್.ಆರ್. ಲೇಔಟ್‌ನ ಜಿ. ಮಲ್ಲಯ್ಯ ಅವರ ಮನೆಯಿಂದ 15 ಕ್ವಿಂಟಾಲ್ ಅಕ್ಕಿ, 50 ಕೆ.ಜಿ. ಬೇಳೆ ಹಾಗೂ ಟಿವಿ ಕಳವು ಮಾಡಲಾಗಿತ್ತು. ಅಲ್ಲದೆ, ಸೆಪ್ಟೆಂಬರ್‌ನಲ್ಲಿ ಮೆಟ್ರಿ ಗ್ರಾಮದಲ್ಲಿ ಬೈಕ್ ಕಳವು ನಡೆದಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರೂಪನಗುಡಿ ರಸ್ತೆ ನಿವಾಸಿ, ಲಾರಿ ಚಾಲಕ ರಾಜೇಶ್ ನಾಯ್ಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 12 ಕ್ವಿಂಟಾಲ್ ಅಕ್ಕಿ, ಬೈಕ್, ಟಿವಿ ಹಾಗೂ ಆಟೋ ಸೇರಿದಂತೆ ಒಟ್ಟು 2.98 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಪಿಐ ರವಿಚಂದ್ರ, ಪಿಎಸ್‌ಐ ವಿರೂಪಾಕ್ಷಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಹೊನ್ನುರಸ್ವಾಮಿ ಕೆ. ಟಿ ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.
Kshetra Samachara
17/10/2026 08:01 pm
LOADING...