ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವ ಉದ್ಯಮಿಗಳಿಗೆ ಉದ್ಯಮದ ಪಾಠ : ನ.17ರಂದು ಬಳ್ಳಾರಿಯಲ್ಲಿ ಕಾರ್ಯಾಗಾರ

ಬಳ್ಳಾರಿ ನಗರದಲ್ಲಿ ಯುವ ಪುರುಷ ಮತ್ತು ಮಹಿಳಾ ಉದ್ಯಮಿಗಳಿಗೆ ಉದ್ಯಮದ ಅವಕಾಶಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲು ಮೈಸೂರು ಆಟೋಮೋಟಿವ್ ಚೇಂಬರ್ ವತಿಯಿಂದ ನವೆಂಬರ್ 17ರಂದು ಒಂದು ದಿನದ ಪ್ರಾಯೋಗಿಕ ಕಾರ್ಯಾಗಾರ ಆಯೋಜಿಸಲಾಗಿದೆ.

ನಗರದ ನಕ್ಷತ್ರ ಹೋಟೆಲ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರ ಆರಂಭವಾಗಲಿದ್ದು, ಈ ಕುರಿತು ಚೇಂಬರ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಆರ್. ಮಂಜುನಾಥ್ ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನ್ಯಾಷನಲ್ ಎಸ್‌ಸಿ-ಎಸ್‌ಟಿ ಹಬ್, ಎಂಎಸ್‌ಎಂಇ ಡಿಐಸಿ, ಪವರ್ ಗ್ರಿಡ್, ಎನ್‌ಎಂಡಿಸಿ, ಎಫ್‌ಸಿಐ ಹಾಗೂ ಕೆಎಸ್‌ಎಫ್‌ಸಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ.

ಡಿಜಿಟಲ್ ಮಾರ್ಕೆಟಿಂಗ್, ಸಾಮಾಜಿಕ ಜಾಲತಾಣಗಳ ಬಳಕೆ, ಟ್ವಿಟರ್, ವಾಟ್ಸಾಪ್, ಫೇಸ್‌ಬುಕ್ ಹಾಗೂ ಜಿಇಎಂ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ವಿಧಾನ ಸೇರಿದಂತೆ ಉದ್ಯಮ ಆರಂಭಿಸಲು ಮತ್ತು ಬೆಳೆಸಲು ಅಗತ್ಯವಾದ ಪ್ರಾಯೋಗಿಕ ಮಾಹಿತಿಯನ್ನು ನೀಡಲಾಗುತ್ತದೆ.

ವಿಶೇಷವಾಗಿ ಎಸ್‌ಸಿ-ಎಸ್‌ಟಿ ಸಮುದಾಯದ ಉದ್ಯಮಿಗಳಿಗೆ ಕೇಂದ್ರ ಸರ್ಕಾರದ ಖರೀದಿ ನೀತಿಯಡಿ ಲಭ್ಯವಿರುವ ಶೇ.4ರಷ್ಟು ಮೀಸಲಾತಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೋಂದಾಯಿತ 150 ಎಸ್‌ಸಿ-ಎಸ್‌ಟಿ ಯುವ ಉದ್ಯಮಿಗಳಿಗೆ ಉಚಿತವಾಗಿ ಉದ್ಯಮದ ಜ್ಞಾನ ಮತ್ತು ಮಾರ್ಗದರ್ಶನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಮಂಜುನಾಥ್, ತಿಮ್ಮಪ್ಪ ಜೋಳದರಾಶಿ, ಲಕ್ಷ್ಮಣ, ಚಂದ್ರಶೇಖರ್, ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9845057287

ವರದಿ : ಹೊನ್ನೂರಸ್ವಾಮಿ ಕೆ. ಟಿ.

ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.

Edited By : Nirmala Aralikatti
Kshetra Samachara

Kshetra Samachara

04/11/2026 07:15 pm

Cinque Terre

540

Cinque Terre

0

ಸಂಬಂಧಿತ ಸುದ್ದಿ