ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಬಳಿ ನಿನ್ನೆ ರಾತ್ರಿ ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ಕೌಲ್ ಬಜಾರ್ ನಿವಾಸಿ ಅಬೂ (18) ಮೃತಪಟ್ಟಿದ್ದಾನೆ.
ಬೈಕ್ ಚಲಾಯಿಸುವಾಗ ಯುವಕ ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಇನ್ನು ನಗರದ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೆ ಮೈನ್ಸ್ ಟಿಪ್ಪರ್‌ಗಳ ಸಂಚಾರ ಹೆಚ್ಚಾಗಿದ್ದು, ಚಾಲಕರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ರಸ್ತೆಗಳು ಟಿಪ್ಪರ್‌ಗಳ ಅಬ್ಬರಕ್ಕೆ ಬಲಿಯಾಗಬೇಕೇ? ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಿ, ಅಮಾಯಕ ಜೀವಗಳ ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನುರಸ್ವಾಮಿ ಕೆ. ಟಿ. ಪಬ್ಲಿಕ್ ನೆಕ್ಸ್ಟ್ , ಬಳ್ಳಾರಿ
PublicNext
30/10/2026 05:21 pm
LOADING...