ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರ ಉತ್ಸವ ಮೂರ್ತಿಗಾಗಿ ಬಡಿಗೆ ಕಾಳಗ: ಓರ್ವ ಭಕ್ತ ಸಾವು!

ಬಳ್ಳಾರಿ/ಆಂಧ್ರಪ್ರದೇಶ : ಜಾತ್ರೆ ಎಂದರೆ ಪೂಜೆ, ಪುನಸ್ಕಾರ, ಹೂವು-ಹಣ್ಣುಗಳ ಸಮರ್ಪಣೆ. ಆದರೆ, ಆಂಧ್ರಪ್ರದೇಶದ ಗಡಿಭಾಗದ ದೇವರಗುಡ್ಡದಲ್ಲಿ ನಡೆಯುವ ವಿಜಯದಶಮಿ ಉತ್ಸವದಲ್ಲಿ ದೇವರ ಉತ್ಸವ ಮೂರ್ತಿಗಾಗಿ ಭಕ್ತರೇ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುವ ವಿಶಿಷ್ಟ ಆಚರಣೆ ನಡೆಯುತ್ತದೆ. ಈ ಬಾರಿಯ ಕಾಳಗದಲ್ಲಿ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಪೋತರಾಜು ಎಂಬ ಭಕ್ತ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶದ ಆದೋನಿ ಸಮೀಪದ ನೆರಣಕಿ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಬೆಟ್ಟದ ಮೇಲಿರುವ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ವಿಜಯದಶಮಿಯ ರಾತ್ರಿ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ನೆರಣಕಿ ಗ್ರಾಮದ ಭಕ್ತರು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬೆಟ್ಟಕ್ಕೆ ಬರುತ್ತಾರೆ.

ಉತ್ಸವ ಮೂರ್ತಿಯನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಬೇಕೆಂಬ ನಂಬಿಕೆಯಿಂದ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಭಕ್ತರು ಪ್ರಯತ್ನಿಸುತ್ತಾರೆ. ಈ ವೇಳೆ ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಳ್ಳುತ್ತಾರೆ. ಮಧ್ಯರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ನಡೆಯುವ ಈ ಕಾಳಗವನ್ನು ವೀಕ್ಷಿಸಲು ಸಾವಿರಾರು ಜನರು ಸೇರುತ್ತಾರೆ.

ನಿಷೇಧವಿದ್ದರೂ ಪೊಲೀಸರ ಸಮ್ಮುಖದಲ್ಲೇ ಕಾಳಗ ನಡೆಯುತ್ತದೆ ಎಂಬ ಆರೋಪಗಳಿವೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಸಂಘರ್ಷದಲ್ಲಿ ಪ್ರತಿವರ್ಷ ಗಾಯಗಳಾಗುವ ಆತಂಕದ ನಡುವೆಯೇ, ಈ ಬಾರಿ ಭಕ್ತನೊಬ್ಬ ಮೃತಪಟ್ಟಿರುವುದು ಕಳವಳ ಮೂಡಿಸಿದೆ.

ಇದೇ ಸಂದರ್ಭದಲ್ಲಿ ದೇವರಗುಡ್ಡದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕಾರ್ಣಿಕ ನುಡಿಯಲಾಗಿದೆ. “ಮಲ್ಲಿಗೆ ಹೂವಿನಿಂದ ಗಂಗೇ ಮೇಲೆ ನಿಂತ್ಯಾಳ ಎಚ್ಚರ” ಎಂಬ ಕಾರ್ಣಿಕದ ನುಡಿ ಭಕ್ತರಲ್ಲಿ ಕುತೂಹಲ ಮೂಡಿಸಿದೆ.

ವರದಿ : ಹೊನ್ನುರಸ್ವಾಮಿ ಕೆ.ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.

Edited By :
PublicNext

PublicNext

22/10/2026 11:33 am

Cinque Terre

10.68 K

Cinque Terre

2

ಸಂಬಂಧಿತ ಸುದ್ದಿ