ಮೈಸೂರು: ನೀರಿನ ಸಂಪು ತೊಳೆಯಲು ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಅರ್ಥಿಂಗ್ ಸಮಸ್ಯೆಯಿಂದ ನೀರಿನಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರಕಾಶ್ (27) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ರಾಜಸ್ಥಾನ ಮೂಲದ ಪ್ರಕಾಶ್ ಕೆಲಸ ಅರಸಿಕೊಂಡು ಮೈಸೂರಿಗೆ ಬಂದಿದ್ದು, ಇದೀಗ ಸಾವನ್ನಪ್ಪಿದ್ದಾರೆ. ಬೈಲಕುಪ್ಪೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಲಕುಪ್ಪೆಯಲ್ಲಿ ಹಾರ್ಡ್‌ವೇರ್ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/10/2026 04:49 pm
LOADING...