ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಅರಮನೆಗೆ ಬಿದ್ದ ಕೆಟ್ಟ ದೃಷ್ಟಿ ತೆಗೆದ ನಾಗರಿಕರು!

ಮೈಸೂರು: ಮೈಸೂರು ಅರಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನಾಗರಿಕರು ವಿನೂತನ ರೀತಿಯಲ್ಲಿ ಸಾಂಪ್ರದಾಯಿಕ ದೃಷ್ಟಿ ನಿವಾರಣೆ ಕಾರ್ಯಕ್ರಮ ನಡೆಸಿದರು.

ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಮುಂಭಾಗದಲ್ಲಿ ಜಾನಪದ ಶೈಲಿಯ ಹಾಡುಗಳನ್ನು ಹಾಡುತ್ತಾ, ಕುಂಬಳಕಾಯಿ ಒಡೆದು ಅರಮನೆಗೆ ದೃಷ್ಟಿ ತೆಗೆದರು. ಈ ವೇಳೆ 'ನಾಯಿ ಕಣ್ಣು, ನರಿ ಕಣ್ಣು ನಾಶವಾಗಲಿ' ಎಂದು ಘೋಷಣೆಗಳನ್ನು ಕೂಗಿದರು.

ಅರಮನೆಯ ಮೇಲೆ ಹತ್ತಾರು ಕೆಟ್ಟ ಕಣ್ಣುಗಳು ಬಿದ್ದಿವೆ. ಅರಮನೆಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ನಾಗರಿಕರು, ಅರಮನೆಯ ರಕ್ಷಣೆಗಾಗಿ ಸಾಂಕೇತಿಕವಾಗಿ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಅರಮನೆ ಕೇವಲ ಕಟ್ಟಡವಲ್ಲ, ಅದು ನಮ್ಮ ಹೆಮ್ಮೆ, ಇತಿಹಾಸ ಮತ್ತು ಪರಂಪರೆಯ ಪ್ರತೀಕ. ಇಂತಹ ಪರಂಪರೆಯ ಸ್ಮಾರಕದ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳಬಾರದು ಎಂಬ ಉದ್ದೇಶದಿಂದ ಈ ಆಚರಣೆ ನಡೆಸಲಾಗಿದೆ ಎಂದು ಭಾಗವಹಿಸಿದ್ದ ನಾಗರಿಕರು ತಿಳಿಸಿದರು.

ಅರಮನೆ ವಿವಾದಗಳ ಬೆನ್ನಲ್ಲೇ ನಡೆದ ಈ ಸಾಂಪ್ರದಾಯಿಕ ದೃಷ್ಟಿ ನಿವಾರಣೆ ಕಾರ್ಯಕ್ರಮದಲ್ಲಿ ಜಯಸಿಂಹ, ಸಂದೇಶ್, ಬೈರತಿ, ಲಿಂಗರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Edited By :
PublicNext

PublicNext

04/11/2026 07:09 pm

Cinque Terre

4.58 K

Cinque Terre

0

ಸಂಬಂಧಿತ ಸುದ್ದಿ