ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಬೈಕ್ ಸಮೇತ ಎಲ್‌ಎಲ್‌ಸಿ ಕಾಲುವೆಗೆ ಬಿದ್ದ ಯುವಕ, ಮೃತದೇಹಕ್ಕಾಗಿ ಶೋಧ

ಬಳ್ಳಾರಿ : ಅತಿವೇಗವಾಗಿ ಬೈಕ್ ಚಲಾಯಿಸುವ ವೇಳೆ ನಿಯಂತ್ರಣ ತಪ್ಪಿ ಯುವಕನೊಬ್ಬ ಬೈಕ್ ಸಮೇತ ಕಾಲುವೆಗೆ ಬಿದ್ದಿರುವ ಘಟನೆ ಕಂಪ್ಲಿ ಸಮೀಪದ ಎಲ್‌ಎಲ್‌ಸಿ ಕಾಲುವೆ ಬಳಿ ನಡೆದಿದೆ. ಘಟನೆಯಲ್ಲಿ ಎಮ್ಮಿಗನೂರು ಗ್ರಾಮದ ರಾಜಸಾಬ್ (21) ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ರಾಜಸಾಬ್ ಅತಿವೇಗವಾಗಿ ಬೈಕ್‌ನಲ್ಲಿ ಕಾಲುವೆ ಸಮೀಪ ಬರುತ್ತಿದ್ದಾಗ ಎದುರಿನಿಂದ ಲಾರಿಯೊಂದು ಬಂದಿದೆ. ಈ ವೇಳೆ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ, ಬೈಕ್ ಸಮೇತ ಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಯುವಕನ ಮೃತದೇಹಕ್ಕಾಗಿ ದೇವಸಮುದ್ರ ಕಾಲುವೆ ಬಳಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೊನ್ನುರಸ್ವಾಮಿ ಕೆ. ಟಿ. ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By : Vinayak Patil
PublicNext

PublicNext

28/10/2026 06:24 pm

Cinque Terre

5.32 K

Cinque Terre

0

ಸಂಬಂಧಿತ ಸುದ್ದಿ