ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ವಿವಿಧ ಹಿಂದೂ ಸಂಘಟನೆಗಳಿಂದ ಪ್ರತಿಷ್ಠಾಪಿಸಲಾಗಿದ್ದ ಪ್ರಸಿದ್ಧ "ಹಿಂದೂ ಮಹಾ ಗಣಪತಿ" ಮೂರ್ತಿಯನ್ನು ಬರೋಬ್ಬರಿ 50 ದಿನಗಳ ಅದ್ಧೂರಿ ಪೂಜೆ-ಪುರಸ್ಕಾರಗಳ ನಂತರ ಇಂದು ಅತ್ಯಂತ ವೈಭವದಿಂದ ವಿಸರ್ಜಿಸಲಾಯಿತು. ಮೆರವಣಿಗೆಗೂ ಮುನ್ನ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮುತ್ತುರಾಜ್ ಅವರು ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ವಿಶೇಷವಾಗಿ ಮೆರವಣಿಗೆ ಹಾದು ಹೋಗುವ ಮುಸ್ಲಿಂ ಬಡಾವಣೆಗಳು ಹಾಗೂ ಕೆ.ಪಿ. ಮೊಹಲ್ಲಾ ಮಸೀದಿಯ ಮುಂಭಾಗದಲ್ಲಿ ಬಿಗಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು.
ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಗಣ್ಯರ ಸಮ್ಮುಖದಲ್ಲಿ ಗಣೇಶ ಮೆರವಣಿಗೆಯು ಮಸೀದಿಯ ರಸ್ತೆಯಲ್ಲಿ ಶಾಂತಿಯುತವಾಗಿ ಸಾಗಿದ್ದು, ನಗರದಲ್ಲಿ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಹಬ್ಬದ ವಾತಾವರಣ ನೆಲೆಸಿದೆ.
PublicNext
29/10/2026 05:34 pm
LOADING...