ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಆರ್.ಟಿ.ಒ ದಿಢೀರ್ ದಾಳಿ: ಫಿಟ್‌ನೆಸ್ ಇಲ್ಲದ ವಾಹನದಲ್ಲಿ ಮಕ್ಕಳ ಸಾಗಾಟ

ಚಿಕ್ಕಮಗಳೂರು: ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಓಡಿಸುವ ಮೂಲಕ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆರ್.ಟಿ.ಒ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ನಗರದ ಹೊರವಲಯದ ಕದ್ರಿಮಿದ್ರಿ ಗ್ರಾಮದ ಬಳಿ ಏಕಾಏಕಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಶಾಲಾ ಬಸ್‌ಗಳನ್ನು ತಡೆದು ವಾಹನಗಳ ದಾಖಲೆಗಳ ತೀವ್ರ ಪರಿಶೀಲನೆ ನಡೆಸಿದರು.

ನಿಯಮಬಾಹಿರವಾಗಿ ಶಾಲಾ ವಾಹನಗಳು ಸಂಚರಿಸುತ್ತಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಚಿಕ್ಕಮಗಳೂರು ಆರ್.ಟಿ.ಒ ಕಚೇರಿಗೆ ದೂರುಗಳನ್ನು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಕಡ್ಡಾಯವಾಗಿ ಇರಬೇಕಾದ ಫಿಟ್‌ನೆಸ್ ಪ್ರಮಾಣಪತ್ರ (FC) ಇಲ್ಲದೆ ಓಡಾಡುತ್ತಿದ್ದ ಬಸ್ಸೊಂದು ಪತ್ತೆಯಾಗಿದೆ.ಆದರೆ, ಆರ್.ಟಿ.ಒ ಅಧಿಕಾರಿಗಳು ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಗಳು ಎಚ್ಚರ ವಹಿಸಿದ್ದು, ಎಫ್.ಸಿ ಅವಧಿ ಮುಗಿದಿರುವ ತಮ್ಮ ಇತರ ವಾಹನಗಳನ್ನು ಶಾಲಾ ಆವರಣದಿಂದ ಹೊರತೆಗೆಯದೆ ಬಚ್ಚಿಟ್ಟಿದ್ದಾರೆ ಎಂದು ದೂರು ನೀಡಿದ್ದ ಕನ್ನಡ ಸಂಘಟನೆಗಳು ಗಂಭೀರ ಆರೋಪ ಮಾಡಿದೆ. ಈ ಬೆಳವಣಿಗೆಯು ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಖಾಸಗಿ ಶಾಲೆಗಳ ನಿರ್ಲಕ್ಷ್ಯವನ್ನು ಜಗಜ್ಜಾಹೀರು ಮಾಡಿದೆ.

Edited By :
PublicNext

PublicNext

29/10/2026 06:31 pm

Cinque Terre

9.28 K

Cinque Terre

0

ಸಂಬಂಧಿತ ಸುದ್ದಿ