ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ : ಕೋಳಿ ಕಳ್ಳ ಚಿರತೆಗೆ ಬೇಸತ್ತ ಜನ!

ಮಂಡ್ಯ : ಕೋಳಿ ಫಾರಂಗೆ ತಡರಾತ್ರಿ ಚಿರತೆ ಲಗ್ಗೆ ಇಟ್ಟಿದ್ದು, 50 ಕೋಳಿಗಳ ಕಥೆ ಫಿನಿಷ್ ಆಗಿದೆ. ನಾಟಿ ಕೋಳಿ ಫಾರಂಗೆ ನುಗ್ಗಿದ ಚಿರತೆ ಕೋಳಿಗಳನ್ನು ಕೊಂದು ಹಾಕಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದಾಪುರದೊಡ್ಡಿಯ ಅನಿಲ್ ಎಂಬುವವರಿಗೆ ಸೇರಿದ ನಾಟಿ ಕೋಳಿ ಫಾರಂ ಇದಾಗಿದೆ ಎಂದು ತಿಳಿದುಬಂದಿದೆ. ತೋಟದ ಮನೆಯಲ್ಲಿ 100ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕಿದ್ದ ಅನಿಲ್ ಅವರ ಫಾರಂಗೆ ತಡರಾತ್ರಿ ಚಿರತೆ ನುಗ್ಗಿ ಕೋಳಿಗಳನ್ನು ಕೊಂದು ಪರಾರಿಯಾಗಿದೆ.

ಪರಿಹಾರ ನೀಡುವಂತೆ ಕೋಳಿ ಫಾರಂ ಮಾಲೀಕ ರೈತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

30/10/2026 12:05 pm

Cinque Terre

3.91 K

Cinque Terre

0

ಸಂಬಂಧಿತ ಸುದ್ದಿ