ಮಂಡ್ಯ: ತಾಲೂಕಿನ ತೂಬಿನಕೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ನೆನ್ನೆ ರಾತ್ರಿ ಕಳ್ಳತನ ನಡೆದಿದೆ.ಈ ಭಾಗದ
ಮೂರು ಕಾರ್ಖಾನೆಗಳಿಗೆ ಕನ್ನ ಹಾಕಿದ್ದು
ಎರಡರಲ್ಲಿ ದುಷ್ಕರ್ಮಿಗಳು ಕಳವು ಮಾಡಿದ್ರೆ ಮತ್ತೊಂದರಲ್ಲಿ ವಿಫಲ ಯತ್ನ ನಡೆಸಿದ್ದಾರೆ.ಮಂಜುನಾಥ್ ಗೆ ಸೇರಿದ ಕಾರ್ಖಾನೆ ಸೇರಿ ವಿವಿಧೆಡೆ ಕಳ್ಳರು ಕೈಚಳಕ ತೋರಿ ಕಾರ್ಖಾನೆಯಲ್ಲಿದ್ದ
ಟಿವಿ, UPS ಬ್ಯಾಟರಿಗಳು, ತೂಕದ ಯಂತ್ರ, ವೆಲ್ಡಿಂಗ್ ಮೆಷಿನ್ ಗಳು, ಕಬ್ಬಿಣದ ಸಾಮಾಗ್ರಿ, ಸಲಕರಣೆಗಳ ಕಳವು ಮಾಡಿದ್ದಾರೆ.
ಘಟನೆ ಬಳಿಕ ದೂರಿನ ಮೇರೆಗೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರ ಭೇಟಿ, ತನಿಖೆ ನಡೆಸಿದ್ದು
ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
PublicNext
03/11/2026 05:10 pm
LOADING...