ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀರಂಗಪಟ್ಟಣ : ನಾಲೆಗೆ ಬಿದ್ದು ಯುವಕನ ಆತ್ಮಹತ್ಯೆ

ಶ್ರೀರಂಗಪಟ್ಟಣ : ಹುಟ್ಟುಹಬ್ಬಕ್ಕೆ ಹೊಸ ಬೈಕ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ವರುಣಾ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ನಡೆದಿದೆ.

ಮೈಸೂರು ಮೂಲದ ನವಾದಿ ವೈಭವ್ (17) ಆತ್ಮಹತ್ಯೆ ಮಾಡಿಕೊಂಡ ಯುವಕ. ಹುಟ್ಟುಹಬ್ಬಕ್ಕೆ ಮನೆಯಲ್ಲಿ ಹೊಸ ಬೈಕ್ ಕೊಡಿಸಿಲ್ಲ ಎಂದು ಮನನೊಂದಿದ್ದ ಆತ, ತನ್ನ ಹುಟ್ಟುಹಬ್ಬದ ದಿನವೇ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕೆಆರ್‌ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Edited By :
PublicNext

PublicNext

05/11/2026 11:46 am

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ