ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: “ಮಂಡ್ಯದವರು ಛತ್ರಿಗಳು” - ಡಿಕೆಶಿ ಹಳೆಯ ಹೇಳಿಕೆಗೆ ಮರುಜೀವ.!

ಮಂಡ್ಯ: ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿದ್ದ ವೇಳೆ ಕಾರ್ಯಕ್ರಮವೊಂದರಲ್ಲಿ ಮಂಡ್ಯದವರು ಛತ್ರಿಗಳು ಎಂದಿದ್ದರಂತೆ. ಇದೀಗ ಆ ಹೇಳಿಕೆ ಖಂಡಿಸಿ ಕ್ಷಮೆಯಾಚನೆಗೆ ರೈತರು ಆಗ್ರಹಿಸಿದ್ದಾರೆ. ಇಂದು ಮಂಡ್ಯಕ್ಕೆ ಸಿಎಂ ಆಗಮನ ಹಿನ್ನಲೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದಾರೆ. ಮಂಡ್ಯಕ್ಕೆ ಕಾಲಿಡುವ ಮುನ್ನ ಮಂಡ್ಯ ಜನರ ಕ್ಷಮೆ ಕೋರಿ ಅಂತ ಆಗ್ರಹ ಮಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಮಂಡ್ಯ ಜಿಲ್ಲೆಗೆ ತನ್ನದೇ ವಿಶಿಷ್ಟ ಸ್ಥಾನ ಇದೆ.ಸ್ವಾಭಿಮಾನದ ಕೋಟೆ ಮಂಡ್ಯ ಜಿಲ್ಲೆಯ ಜನರಿಗೆ ಅಪಮಾನ ಮಾಡಿದ್ದೀರಿ. ದೊಡ್ಡ ದೊಡ್ಡ ರಾಜಕೀಯ ನಾಯಕರ ಕೊಟ್ಟ ಜಿಲ್ಲೆ. ಮಂಡ್ಯ ಜನರು ಛತ್ರಿಗಳು ಎಂದು ಲಘುವಾಗಿ ಮಾತನಾಡೋದು ಸರಿಯಲ್ಲ. ಜಿಲ್ಲೆಯಲ್ಲಿ 6 ಜನ ಶಾಸಕರನ್ನ ಕೊಟ್ಟಿದೆ. ಅವರ ಕೈನಲ್ಲಿ ನಿಮ್ಮ ಮನೆಯ ಕೆಲಸ ಮಾಡಿಸಿಕೊಳ್ಳಿ. ಆದ್ರೆ ಮಂಡ್ಯ ಜನರ ಬಗ್ಗೆ ಮಾತನಾಡಬೇಕಾದ್ರೆ ನಾಲಿಗೆ ಮೇಲೆ ಎಚ್ಚರಿಕೆ ಇರಲಿ. ಅರೆಸ್ಟ್ ಮಾಡಿದ್ರು ಪರವಾಗಿಲ್ಲ ಮಂಡ್ಯ ಜಿಲ್ಲೆಯ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ದಾರೆ.

Edited By :
PublicNext

PublicNext

31/10/2026 04:25 pm

Cinque Terre

7.01 K

Cinque Terre

0

ಸಂಬಂಧಿತ ಸುದ್ದಿ