ಮಂಡ್ಯ: ನಮ್ಮಲ್ಲಿ ನೀರಿಲ್ಲ ಎನ್ನುತ್ತಲೇ ರಾಜಾರೋಷವಾಗಿ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸುತ್ತಿದೆ. ಸರ್ಕಾರದ ಭಂಡತನದ ನಿರ್ಧಾರದಿಂದ ಜಿಲ್ಲೆಯ KRS ಜಲಾಶಯ ಬರಿದಾಗುತ್ತಿದೆ. ಇದರ ನಡುವೆ KRS ಡ್ಯಾಂಗೆ ಒಳಹರಿವು ಸಂಪೂರ್ಣ ಕಡಿಮೆಯಾಗಿದ್ದರೂ ತಮಿಳುನಾಡಿಗೆ ಮಾತ್ರ ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಈಗಲೂ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ತಮಿಳುನಾಡಿಗೆ ರಾಜ್ಯ ಸರ್ಕಾರ ಹರಿಸುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಎದುರಾಗಲಿದೆ.
ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವ ನಿರ್ಧಾರಕ್ಕೆ ಜಿಲ್ಲೆಯ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
KRS ಡ್ಯಾಂನ ಇಂದಿನ ನೀರಿನ ಮಟ್ಟ:
ಗರಿಷ್ಠ ನೀರಿನ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 100.93 ಅಡಿ
ಒಳಹರಿವು: 453 ಕ್ಯೂಸೆಕ್
ಹೊರಹರಿವು: 7947 ಕ್ಯೂಸೆಕ್
ಇಂದಿನ ನೀರಿನ ಸಂಗ್ರಹ: 23.543 TMC
ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ: 49.50 TMC
PublicNext
03/11/2026 07:16 pm
LOADING...