ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KSRTC ಬಸ್ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಶ್ರೀರಂಗಪಟ್ಟಣ: ಹೆದ್ದಾರಿಯಲ್ಲಿ ಬೈಕ್ ಮತ್ತು ಪಾದಚಾರಿಗೆ KSRTC ಬಸ್ ಡಿಕ್ಕಿಯಾದ ಪರಿಣಾಮ

ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ನಡೆದಿದೆ.

ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮದ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ರಸ್ತೆ ತಡೆಯಿಂದ ಶ್ರೀರಂಗಪಟ್ಟಣ - ಜೀವರ್ಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿತ್ತು.ಪದೇ ಪದೇ ತಮ್ಮ ಗ್ರಾಮದ ಬಳಿ ಈ ರೀತಿಯ ಅಪಘಾತ ವಾಗ್ತಿದ್ರು ಕ್ರಮ ವಹಿಸದ್ದಕ್ಕೆ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಗಾಯಗೊಂಡವರ ವಿವರ ಕಲೆ ಹಾಕ್ತಿದ್ದಾರೆ.ಈ ಸಂಬಂಧ

ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

03/11/2026 03:26 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ