ಕೆ.ಆರ್.ಪೇಟೆ: ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮುಷ್ಕರ ಮತ್ತು ಪ್ರತಿಭಟನೆಗೆ ಕೆ.ಆರ್.ಪೇಟೆ ವಕೀಲರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ನಾಗೇಗೌಡ ತಿಳಿಸಿದರು.
ಕೆ.ಆರ್.ಪೇಟೆ ವಕೀಲರ ಸಂಘದಲ್ಲಿ ಸಭೆ ನಡೆಸಿದ ನಂತರ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲರ ಮೇಲೆ ದಿನೇದಿನೇ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ನಾಗೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಎಸ್.ಜೆ. ಮಂಜೇಗೌಡ, ಜಂಟಿ ಕಾರ್ಯದರ್ಶಿ, ಖಜಾಂಚಿ ಪ್ರಸನ್ನ, ದೊಡ್ಡಯ್ಯ, ಹಿರಿಯ ವಕೀಲರಾದ ಜಿ.ಆರ್. ಅನಂತರಾಮಯ್ಯ, ಎಂ.ಆರ್. ಪ್ರಸನ್ನಕುಮಾರ್, ಶಿವರಾಂ, ಕೆ.ಎನ್. ನಾಗರಾಜು, ವಕೀಲರಾದ ನಿರಂಜನ್, ಎಸ್.ಆರ್. ನವೀನ್ ಕುಮಾರ್, ಎಸ್. ಸತೀಶ್, ಎನ್. ಮಂಜುನಾಥ್, ಜಿ.ಕೆ. ಸತೀಶ್, ಸುಪ್ರೀತಾ ಯು, ಪಿ.ಬಿ. ಮಂಜುನಾಥ್, ಕೆ.ಟಿ. ವಿಶ್ವನಾಥ್, ಜಿ.ವಿ. ಜಗದೀಶ್ ನಾರ್ಗೋನಹಳ್ಳಿ, ಜಗದೀಶ್ ತೆಂಗಿನಘಟ್ಟ, ಶಿವಕುಮಾರ್, ಯೋಗೇಶ್, ಅನ್ವೇಶ್, ಬಿ.ಸಿ. ಹರ್ಷ, ಬಿ.ಎನ್. ಸತೀಶ್, ರಾಣಿ, ರಶ್ಮಿ, ಭಾವನಾ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Kshetra Samachara
03/11/2026 08:02 pm
LOADING...