ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್: ನಿಷ್ಪಕ್ಷಪಾತ ತನಿಖೆಗೆ ಸಿ.ಟಿ. ರವಿ ಆಗ್ರಹ

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿಸಿಬಿ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ, ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

"ಸ್ಟಿಂಗ್ ಆಪರೇಷನ್ ಯಾರು, ಏಕೆ ಮಾಡಿದರು ಹಾಗೂ ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಸಿಸಿಬಿ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ನಾಲ್ಕೂವರೆ ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ, ಮುಖ್ಯಮಂತ್ರಿಯಾಗಿದ್ದವರ ಮೇಲೆಯೇ ಸ್ಟಿಂಗ್ ನಡೆದರೆ ಸಾಮಾನ್ಯರ ಗತಿಯೇನು?" ಎಂದು ಅವರು ಪ್ರಶ್ನಿಸಿದ್ದಾರೆ.

ಸ್ಟಿಂಗ್‌ನ ಸೂತ್ರಧಾರಿ ಹಾಗೂ ಪಾತ್ರಧಾರಿ ಇಬ್ಬರೂ ಕಾಂಗ್ರೆಸ್‌ನವರೇ ಆಗಿರಬಹುದು ಎಂಬ ತಮ್ಮ ಅನುಮಾನಕ್ಕೆ ಸಿಸಿಬಿಯ ಈ ಭಾಗಶಃ ತನಿಖೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಯಾರು, ಏಕೆ ಈ ಕೃತ್ಯ ಎಸಗಿದರು ಎಂಬ ಸಂಪೂರ್ಣ ಸತ್ಯವನ್ನು ಪತ್ತೆಹಚ್ಚುವುದು ಸಿಸಿಬಿಯ ಜವಾಬ್ದಾರಿಯಾಗಿದೆ. ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರಬರದಿದ್ದರೆ, ಸಿಸಿಬಿ ತನಿಖೆಯ ಬಗ್ಗೆ ಜನರ ಮನಸ್ಸಿನಲ್ಲಿರುವ ಅನುಮಾನ ಹಾಗೆಯೇ ಉಳಿಯಲಿದೆ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.

Edited By :
PublicNext

PublicNext

30/10/2026 01:42 pm

Cinque Terre

7.8 K

Cinque Terre

0

ಸಂಬಂಧಿತ ಸುದ್ದಿ