ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದಲಿತರ ಮೀಸಲಾತಿ ಕಸಿದ ಕಾಂಗ್ರೆಸ್ ಶಾಸಕ; ದಸಂಸ ಗಂಭೀರ ಆರೋಪ

ಚಿಕ್ಕಮಗಳೂರು: ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ತೀವ್ರ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಬಿ. ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯ ಸರ್ಕಾರವು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಘೋಷಣೆ ಮಾಡಿದೆ. ಈ ಹಿಂದೆ ಮಾಜಿ ಸಚಿವ ಸಗೀರ್ ಅಹಮದ್ ಹಾಗೂ ಸಿ.ಟಿ. ರವಿ ಅವರ ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ಜಿಲ್ಲಾ ಪಂಚಾಯಿತಿಗೆ ಕನಿಷ್ಠ 1 ರಿಂದ 2 ಕ್ಷೇತ್ರಗಳನ್ನು ದಲಿತರಿಗೆ ಮೀಸಲಿಡಲಾಗುತ್ತಿತ್ತು. ಆದರೆ, 2026-27ನೇ ಸಾಲಿನಲ್ಲಿ ಈ ಅವಕಾಶವನ್ನು ಕೈಬಿಡುವ ಮೂಲಕ ದಲಿತ ಅಭ್ಯರ್ಥಿಗಳಿಗೆ ಜಿ.ಪಂ. ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಎಚ್.ಡಿ. ತಮ್ಮಯ್ಯ ಅವರು ತಮ್ಮನ್ನು ತಾವು ಬುದ್ಧ, ಬಸವ ಮತ್ತು ಅಂಬೇಡ್ಕರ್ ವಾದಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರದ್ದೇ ಅವಧಿಯಲ್ಲಿ ದಲಿತರಿಗೆ ಜಿಲ್ಲೆಯಲ್ಲಿ ಯಾವುದೇ ನಿಗಮ ಮಂಡಳಿಗಳಲ್ಲೂ ಸ್ಥಾನಮಾನ ನೀಡದೆ ವಂಚಿಸಲಾಗಿದೆ. ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಹಾಗೂ ಶಾಸಕರು ಇದೀಗ ಅದೇ ಸಮುದಾಯಕ್ಕೆ ಬೆನ್ನು ತೋರಿಸುತ್ತಿರುವುದನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Edited By :
PublicNext

PublicNext

05/11/2026 08:43 am

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ