ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ​'ಸ್ಟಿಂಗ್' ರಹಸ್ಯ : ಸಿದ್ದರಾಮಯ್ಯ ಕೇಳಿದ ಪ್ರಶ್ನೆಯನ್ನೇ ಮುಂದಿಟ್ಟ ಸಿ. ಟಿ. ರವಿ

ಚಿಕ್ಕಮಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಇತ್ತೀಚಿನ ಸ್ಟಿಂಗ್ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರಕರಣದ ತನಿಖೆಯು ಕೇವಲ ಮೇಲ್ನೋಟಕ್ಕೆ ಸೀಮಿತವಾಗದೆ, ಸ್ಟಿಂಗ್ ಆಪರೇಷನ್ ಮಾಡಿದವರು ಯಾರು ಮತ್ತು ಅದರ ಹಿಂದಿರುವ ರೂವಾರಿಗಳು ಯಾರು ಎಂಬ ಮೂಲದಿಂದಲೇ ಪ್ರಾರಂಭವಾಗಬೇಕು ಎಂಬುದು ಅವರ ಆಗ್ರಹಿಸಿದ್ದಾರೆ.

ಪಾಂಡೆ ಎಂಬುವವರು ಮೊಬೈಲ್ ಖರೀದಿಸಿ ಹೆಚ್. ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ನೀಡಿದ್ದಾರೆ ಎಂಬ ಮಾಹಿತಿ ಇದೆಯೇ ಹೊರತು, ವಾಸ್ತವವಾಗಿ ಸ್ಟಿಂಗ್ ಮಾಡಿದವರ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ ಹಾಗೂ ಅವರನ್ನು ಇದುವರೆಗೂ ಬಂಧಿಸಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಟಿಂಗ್ ಮಾಡಿದವರ ಹೆಸರನ್ನು ಬಾಯ್ಬಿಟ್ಟರೆ ಎಲ್ಲೋ ತಮ್ಮ ಅಧಿಕಾರ ಸ್ಥಾನಪಲ್ಲಟವಾಗುತ್ತದೆಯೋ ಎಂಬ ಆತಂಕ ಆಡಳಿತ ವರ್ಗಕ್ಕಿದೆಯೇ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ವಿಶೇಷವೆಂದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಸ್ಟಿಂಗ್ ಮಾಡಿದವರ ಬಂಧನವೇಕಿಲ್ಲ ಮತ್ತು ಅವರ ಹಿಂದಿರುವ ರಕ್ಷಕರು ಯಾರು ಎಂಬ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂಬುದನ್ನು ಸಿ. ಟಿ. ರವಿ ಉಲ್ಲೇಖಿಸಿದ್ದಾರೆ.

ರಾಜಕಾರಣದಲ್ಲಿ ನಾಯಕರ ವಿರುದ್ಧ ನಡೆಯುವ ಇಂತಹ ಷಡ್ಯಂತ್ರಗಳ ಹಿಂದೆ ಕೇವಲ ಒಂದೇ ಕಾರಣವಿರುವುದಿಲ್ಲ, ಬದಲಾಗಿ ಹಲವಾರು ರಾಜಕೀಯ ಲೆಕ್ಕಾಚಾರಗಳು ಇರುತ್ತವೆ ಎಂದು ಅವರು ವಿಶ್ಲೇಷಿಸಿದ್ದಾರೆ.

Edited By :
PublicNext

PublicNext

03/11/2026 09:22 pm

Cinque Terre

5.36 K

Cinque Terre

0

ಸಂಬಂಧಿತ ಸುದ್ದಿ