ಮೈಸೂರು : ರಾಜಮನೆತನದ ಬಗ್ಗೆ ಯತೀಂದ್ರ ಅವರ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ಪೋಸ್ಟ್‌ಕಾರ್ಡ್ ಚಳವಳಿ ನಡೆಯುತ್ತಿದೆ. ಒಂಟಿಕೊಪ್ಪಲಿನ ಅಂಚೆ ಕಚೇರಿ ಎದುರು ಸೇವ್ ಹಿಂದೂ ಟೆಂಪಲ್ಸ್ ಟೀಮ್ ವತಿಯಿಂದ ಈ ಅಭಿಯಾನ ಆಯೋಜಿಸಲಾಗಿದೆ.
ಯತೀಂದ್ರ ಅವರಿಗೆ ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸುವ ಮೂಲಕ ಸೇವ್ ಹಿಂದೂ ಟೆಂಪಲ್ಸ್ ತಂಡದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ರಾಜಮನೆತನದ ಕೊಡುಗೆಗಳ ಬಗ್ಗೆ ಪೋಸ್ಟ್‌ಕಾರ್ಡ್‌ಗಳ ಮೂಲಕ ಯತೀಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ವಿನೂತನ ರೀತಿಯಲ್ಲಿ ಸಚಿವ ಯತೀಂದ್ರ ವಿರುದ್ಧ ಪೋಸ್ಟ್‌ಕಾರ್ಡ್ ಪ್ರತಿಭಟನೆ ನಡೆಸುತ್ತಿರುವುದು ಜನರ ಗಮನ ಸೆಳೆಯುತ್ತಿದೆ.
PublicNext
30/10/2026 08:02 pm
LOADING...