ಮೈಸೂರು: ಹೆಚ್.ಸಿ ಮಹದೇವಪ್ಪ ಕಾಂಗ್ರೆಸ್ ತೊರೆಯುತ್ತಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ರಾಜಕೀಯ ವಲಯದಲ್ಲಿ ಬಹು ಚರ್ಚೆಗೆ ಗ್ರಾಸ ಆಗಿದೆ. ಈ ಸಂಬಂಧಪಟ್ಟ ಹಾಗೇ ಸಂಸದ ಸುನೀಲ್ ಬೋಸ್ ಮಾತನಾಡಿದ್ದಾರೆ. ನಮ್ಮ ತಂದೆ ಕಾಂಗ್ರೆಸ್ ಪಕ್ಷ ಬಿಡಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದಲೇ ಸ್ಪರ್ಧೆ ಮಾಡ್ತಾರೆ.ಕಾಂಗ್ರೆಸ್ ಪಕ್ಷ ನಮ್ಮ ತಂದೆಗೆ ಅನ್ಯಾಯ ಮಾಡಿಲ್ಲ.ಕಾಂಗ್ರೆಸ್ ಪಕ್ಷದಿಂದ ಅವ್ರು ಎರಡು ಬಾರಿ ಮಂತ್ರಿ ಆಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜೊತೆಗೂಡಿ ನಂಜನಗೂಡಿನಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಊಹಾಪೋಹಗಳು ಓಡಾಡುತ್ತಿದೆ. ಇದು ಸುಳ್ಳು ಸುದ್ದಿ ನಮ್ಮ ತಂದೆ ಮಹದೇವಪ್ಪ ಅವ್ರು ಕಾಂಗ್ರೆಸ್ ನಲ್ಲೇ ಇರ್ತಾರೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ನಿಂದ ನರಸೀಪುರದಲ್ಲಿ ಸ್ಪರ್ಧೆ ಮಾಡ್ತಾರೆ ಅಂತ ನಂಜನಗೂಡಿನಲ್ಲಿ ಸಂಸದ ಸುನೀಲ್ ಬೋಸ್ ಹೇಳಿದ್ದಾರೆ.
PublicNext
31/10/2026 07:24 pm
LOADING...