ಚಾಮರಾಜನಗರ : ಸ್ಟಿಂಗ್ ಆಪರೇಷನ್ ಮಾಡಿರೊದು ನೂರಕ್ಕೆ ನೂರು ಕುಮಾರಸ್ವಾಮಿಯೇ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, ಮೊದಲಿಂದಲೂ ಇಂತಹ ಕೆಲಸ ಮಾ ಡೊದು ಕುಮಾರಸ್ವಾಮಿಯೇ. ಇಂತಹ ಕೆಲಸಗಳನ್ನ ಮತ್ತೆ ಯಾರು ಮಾಡಲ್ಲ. ಅಧಿವೇಶನ ಆರಂಭವಾದಾಗ ನನ್ನ ಹತ್ತಿರ ಪೆಡ್ರೈವ್ ಇದೆ, ಪೆಡ್ರೈವ್ ಇದೆ ಎಂದು ಪದೇ ಪದೇ ಹೇಳುತ್ತಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯದ ಸಿಎಂ ಆಗಿರೋದು ಕುಮಾರಸ್ವಾಮಿ ಅವರಿಗೆ ನೆಮ್ಮದಿ ಇಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಇಂತಹ ಕೆಲಸ ಮಾಡುತ್ತಾ ಇದ್ದಾರೆ. ಸ್ಟಿಂಗ್ ಆಪರೇಷನ್ ಮಾಡಿರೊದು ಕುಮಾರಸ್ವಾಮಿ ಎಂದು ವರದಿಯಾಗಿದೆ ಎಂದ ಅವರು, ಕೃಪಾಆಳ್ವಾ ಪಕ್ಷಕ್ಕೆ ವಿರೋಧವಾಗಿ ಮಾತನಾಡಿರೊದಕ್ಕೆ ಅವರನ್ನ ಪಕ್ಷದಿಂದ ಸಸ್ಪೆಂಡ್ ಮಾಡಿದ್ದಾರೆ. ಸ್ಟಿಂಗ್ ವಿಚಾರದಲ್ಲಿ ಕೃಪಾಆಳ್ವ ಪಾತ್ರವಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದರು.
PublicNext
01/11/2026 12:10 pm
LOADING...