ವಿಜಯಪುರ: ರಾಜ್ಯದಲ್ಲಿ ಎರಡು ಸ್ಟಿಂಗ್ ಆಪರೇಷನ್ ಸಿಡಿ ಕಂಪನಿಗಳಿದ್ದು, ಅವುಗಳ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್‌ಗಳು ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಷ್ಟೇ ನಡೆದಿಲ್ಲ. ರಾಜ್ಯದಲ್ಲಿ ಬಹಳಷ್ಟು ಜನರ ಮೇಲೆ ಸ್ಟಿಂಗ್ ಆಪರೇಷನ್‌ಗಳಾಗಿವೆ. ರಾಜ್ಯದಲ್ಲಿ ಎರಡು ಸ್ಟಿಂಗ್ ಆಪರೇಷನ್ ಕಾರ್ಖಾನೆಗಳಿವೆ. ಒಂದು ಬಿಜೆಪಿ ಪೂಜ್ಯ ತಂದೆಯವರ ಕಿರಿಯ ಮಗನ ಮಾರ್ಗದರ್ಶನದಲ್ಲಿ, ಮತ್ತೊಂದು ರಾಜ್ಯದ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಆ ಇಬ್ಬರನ್ನೂ ತನಿಖೆಗೆ ಒಳಪಡಿಸಿ ಮಂಪರು ಪರೀಕ್ಷೆ ನಡೆಸಿದರೆ ಎಲ್ಲ ಸತ್ಯವೂ ಹೊರಬೀಳಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಸಿಡಿಯನ್ನು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ತೋರಿಸಿಯೇ ಅವರನ್ನು ಕೆಳಗಿಳಿಸಲಾಗಿದೆ. ಈ ವಿಚಾರವನ್ನು ಸಿದ್ದರಾಮಯ್ಯ ಅವರ ಆಪ್ತರೇ ನನಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಜೀವನವನ್ನು ಮುಗಿಸಲು ವ್ಯವಸ್ಥಿತ ಷಡ್ಯಂತ್ರ ರೂಪಿಸಲಾಗಿದೆ ಎಂದು ಯತ್ನಾಳ್ ಆರೋಪಿಸಿದರು.
ಈ ಷಡ್ಯಂತ್ರದಲ್ಲಿ ಮೊದಲು ಗುರಿಯಾಗಿದ್ದು ರಾಜಣ್ಣ, ಎರಡನೇಯದಾಗಿ ಸಿದ್ದರಾಮಯ್ಯ ಹಾಗೂ ಈಗ ಮೂರನೇ ಟಾರ್ಗೆಟ್ ಆಗಿ ಸತೀಶ್ ಜಾರಕಿಹೊಳಿ ಅವರನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದರು.
ಇನ್ನು ಎಸ್‌ಐಆರ್ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ತಿಳಿಸಿದ ಯತ್ನಾಳ್, ಅವರ ಹೇಳಿಕೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
PublicNext
01/11/2026 10:31 pm
LOADING...