ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 10 ವರ್ಷ ಸಿಎಂ ಅಭ್ಯರ್ಥಿ ಅಲ್ಲ ಎಂದು ಬರೆದುಕೊಡಲಿ- ಶಾಸಕ ಯತ್ನಾಳ್ ಸವಾಲ್

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂದಿನ 10 ವರ್ಷಗಳ ಕಾಲ ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಬರೆದು ಕೊಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದರು.

ವಿಜಯಪುರ ನಗರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿದ್ದಾರೆ, ಹಿರಿಯ ನಾಯಕರಿದ್ದಾರೆ. ಆದರೆ, ರಾಜ್ಯಾಧ್ಯಕ್ಷರ ಮೇಲೆ ಚೆಕ್ ಮೂಲಕ ಹಣ ಪಡೆದ ಕಳಂಕವಿದೆ. ಹೀಗಾಗಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರದ ನಾಯಕರನ್ನು ಬಳಸಿಕೊಂಡು ರಾಜ್ಯದ ನಾಯಕರಿಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆದ್ದರಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬರೆದುಕೊಡಲಿ ಎಂದು ಯತ್ನಾಳ್ ಲೇವಡಿ ಮಾಡಿದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಿನ್ನೆ ದೇವೇಗೌಡರನ್ನು ಅವರಪ್ಪ ಭೇಟಿಯಾಗಿದ್ದಾರೆ. ಅವರ ಬಳಿ ಯಾಕೆ ಹೋಗಬೇಕು? ನನ್ನ ಮಗನ ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಡಿ, ಮುಂದಿನ ದಿನಗಳಲ್ಲಿ ನಿಮಗೆ ಟೋಪಿ ಹಾಕುತ್ತೇನೆ ಎಂದು ಹೇಳಲು ಹೋಗಿದ್ದಾರೆಯೇ ಎಂದು ವ್ಯಂಗ್ಯವಾಡಿದರು.

ಇದಕ್ಕೆ ದೇವೇಗೌಡರು, ನಿನ್ನ ಟೋಪಿ ಬಹಳ ಹಿಂದೆಯೇ ನೋಡಿದ್ದೇನೆ. ನೀನು ಎಷ್ಟು ಯೋಗ್ಯ ಎಂಬುದು ನನಗೆ ಗೊತ್ತಿದೆ ಎಂದು ಹೇಳಿರಬಹುದು ಎಂದು ಕುಟುಕಿದರು.

ರಾಜ್ಯಾಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ದೇವೇಗೌಡರ ಬಳಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇವರಿಗೆ ಟಾಂಗ್ ಕೊಡುತ್ತಾರೆ, ಇವರು ಅವರಿಗೆ ಟಾಂಗ್ ಕೊಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಡುವಿನ ರಾಜಕೀಯ ಬೆಳವಣಿಗೆಗಳ ಕುರಿತು ಯತ್ನಾಳ್ ವ್ಯಂಗ್ಯವಾಡಿದರು.

Edited By : Somashekar
PublicNext

PublicNext

01/11/2026 10:57 pm

Cinque Terre

8.24 K

Cinque Terre

2

ಸಂಬಂಧಿತ ಸುದ್ದಿ