ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಕೃತಿಯ ವಿಸ್ಮಯ; ಒಂದೇ ತೆಂಗಿನ ಮರದಲ್ಲಿ ಮೂಡಿದ ಐದು ಸುಳಿಗಳು

ಚಾಮರಾಜನಗರ : ಚಾಮರಾಜನಗರ ತಾಲೂಕಿನ ಕುಮಚಹಳ್ಳಿ ಗ್ರಾಮದಲ್ಲಿ ಪ್ರಕೃತಿಯ ಅಚ್ಚರಿಯ ಕೌತುಕವೊಂದು ಬೆಳಕಿಗೆ ಬಂದಿದ್ದು, ಗ್ರಾಮದ ರವೀಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿರುವ ತೆಂಗಿನ ಮರದಲ್ಲಿ ಒಂದೇ ಬಾರಿಗೆ ಐದು ಸುಳಿಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಪ್ರತಿಯೊಂದು ತೆಂಗಿನ ಮರದಲ್ಲಿ ಒಂದೇ ಸುಳಿ ಇರುವುದು ವಾಡಿಕೆ, ಅತ್ಯಂತ ವಿರಳ ಸಂದರ್ಭಗಳಲ್ಲಿ ಎರಡು ಸುಳಿಗಳು ಕಾಣಿಸಿಕೊಳ್ಳುವುದುಂಟು. ಆದರೆ, ಇಲ್ಲಿ ಏಕಕಾಲಕ್ಕೆ ಐದು ಸುಳಿಗಳು ಮೂಡಿಬಂದಿರುವುದು ಸ್ಥಳೀಯರನ್ನು ದಂಗುಬಡಿಸಿದೆ. ಇದನ್ನು ದೈವಶಕ್ತಿ ಅಥವಾ ದೇವರ ಪವಾಡವೆಂದು ಭಾವಿಸಿರುವ ಅಕ್ಕಪಕ್ಕದ ಗ್ರಾಮಸ್ಥರು ಮುಗಿಬಿದ್ದು ಈ ಅಪರೂಪದ ಮರವನ್ನು ವೀಕ್ಷಿಸುತ್ತಿದ್ದು, ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

Edited By : Vinayak Patil
PublicNext

PublicNext

03/11/2026 09:05 am

Cinque Terre

10.78 K

Cinque Terre

0

ಸಂಬಂಧಿತ ಸುದ್ದಿ