ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಡಿವೈಡರ್ ಜಿಗಿದು ಮತ್ತೊಂದು ಕಾರಿನ ಮೇಲೆ ಬಿದ್ದ ಕಾರು ಭೀಕರ ಅಪಘಾತದಲ್ಲಿ ಓರ್ವ ಸಾವು

ಚಿಕ್ಕಮಗಳೂರಿನ ಮೌಂಟೇನ್ ವ್ಯೂ ಶಾಲೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಡಿವೈಡರ್ ಹಾರಿ ಮತ್ತೊಂದು ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಓರ್ವ ಯುವಕ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಹೋಂ ಸ್ಟೇ ಕಡೆಯಿಂದ ಚಿಕ್ಕಮಗಳೂರು ನಗರದತ್ತ ಬರುತ್ತಿದ್ದ ಕೆಎ 15 ಎಂ 3223 ನಂಬರಿನ ಕಾರು ಚಾಲಕನ ನಿಯಂತ್ರಣ ತಪ್ಪಿ ಮೌಂಟೇನ್ ವ್ಯೂ ಶಾಲೆ ಮುಂಭಾಗದ ಡಿವೈಡರ್‌ಗೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಜಿಗಿದು, ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸಂತೋಷ್ ಎಂಬ ಯುವಕ ದುರಾದೃಷ್ಟವಶಾತ್ ಮೃತಪಟ್ಟಿದ್ದಾರೆ. ಇದೇ ವೇಳೆ ಕಾರು ಚಲಾಯಿಸುತ್ತಿದ್ದ ಪವನ್ ಹಾಗೂ ಜೊತೆಯಲ್ಲಿದ್ದ ಕೌಶಿಕ್ ಎಂಬುವವರಿಗೆ ಗಾಯಗಳಾಗಿವೆ.ಈ ದುರ್ಘಟನೆಗೆ ಸಂಬಂಧಿಸಿದಂತೆ ಮೃತ ಸಂತೋಷ್ ಮಾವ ಮಣಿ ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಾಲಕ ಪವನ್ ಅವರ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಸಂಚಾರ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Edited By : Vinayak Patil
PublicNext

PublicNext

03/11/2026 09:27 am

Cinque Terre

10.31 K

Cinque Terre

0

ಸಂಬಂಧಿತ ಸುದ್ದಿ