ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ತಪ್ಪಿದ ಭಾರಿ ಅನಾಹುತ: ಚಲಿಸುವಾಗಲೇ ಕಳಚಿದ ಸರ್ಕಾರಿ ಬಸ್ಸಿನ ಆಕ್ಸಲ್ ಶಾಫ್ಟ್

ಚಿಕ್ಕಮಗಳೂರು: ಗ್ರಾಮೀಣ ಭಾಗದ ಮೂಲಕ ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಸರ್ಕಾರಿ ಬಸ್ಸೊಂದು ಚಲಿಸುತ್ತಿರುವಾಗಲೇ ಚಕ್ರದ ನಟ್ ಗಳು ತುಂಡಾಗಿ ಆಕ್ಸಲ್ ಶಾಫ್ಟ್ ಕಳಚಿ ಬಿದ್ದ ಘಟನೆ ಚಿಕ್ಕಮಗಳೂರು ಮತ್ತು ಹಾಸನ ಗಡಿ ಗ್ರಾಮ ಬಾಣಾವರ ಬಳಿ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಿತ್ಯ ಚಿಕ್ಕಮಗಳೂರಿನಿಂದ ಹೊರಟು ಕೈಮರ, ಕಳಸಾಪುರ, ಬೆಳವಾಡಿ ಹಾಗೂ ಬಾಣಾವರ ಮೂಲಕ ಸಂಚರಿಸುವ ಈ ಬಸ್ ವಾರಕ್ಕೊಮ್ಮೆಯಾದರೂ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿದೆ. ಇಂದು ಬಾಣಾವರ ರೈಲ್ವೆ ಬ್ರಿಡ್ಜ್ ಬಳಿ ಚಲಿಸುವಾಗಲೇ ಬಸ್ಸಿನ ಚಕ್ರ ಭಾರಿ ಪ್ರಮಾಣದಲ್ಲಿ ಶೇಕ್ ಆಗಿದೆ. ತಕ್ಷಣವೇ ಜಾಗೃತಗೊಂಡ ಚಾಲಕ ವಾಹನವನ್ನು ನಿಯಂತ್ರಿಸಿದ್ದು, ಸಂಭವಿಸಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಪದೇ ಪದೇ ನಡೆಯುತ್ತಿರುವ ಈ ಘಟನೆಯಿಂದ ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದಿಂದ ಸಂಚರಿಸುವ ಲಾಂಗ್ ರೂಟ್ ಬಸ್ಸುಗಳ ಸಂಖ್ಯೆ ಕಡಿಮೆ ಇರುವುದರಿಂದ, ಶಾಲಾ-ಕಾಲೇಜು ಮಕ್ಕಳು ಹಾಗೂ ತುರ್ತು ಕೆಲಸದ ನಿಮಿತ್ತ ತೆರಳುವ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡದೆ ಬಸ್ಸುಗಳನ್ನು ಸಮರ್ಪಕವಾಗಿ ದುರಸ್ತಿಗೊಳಿಸಿ ಕಾರ್ಯಾಚರಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Vinayak Patil
PublicNext

PublicNext

03/11/2026 11:40 am

Cinque Terre

7.99 K

Cinque Terre

0

ಸಂಬಂಧಿತ ಸುದ್ದಿ