ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಪಂಪ್‌ಸೆಟ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಿಲ್ಲದೆ ಸೂಕ್ತ ಬೆಳೆಯೂ ಸಿಗದೆ ಮೊದಲೇ ಕಂಗಾಲಾಗಿರುವ ಅನ್ನದಾತರಿಗೆ ಈಗ ಕಳ್ಳರ ಕಾಟ ಗಾಯದ ಮೇಲೆ ಎಳೆ ಎಳೆದಂತಾಗಿದೆ. ಹಸಗೂಲಿ ಗ್ರಾಮದ ಸುಮಾರು 10ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ನುಗ್ಗಿರುವ ಖದೀಮರು, ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಕೇಬಲ್‌ನಲ್ಲಿದ್ದ ತಾಮ್ರದ ತಂತಿಗಾಗಿ ಸರಣಿ ಕಳವು ನಡೆಸಿದ್ದಾರೆ. ಒಂದೇ ರಾತ್ರಿಯಲ್ಲಿ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಕೇಬಲ್ ಕದ್ದು ಪರಾರಿಯಾಗಿದ್ದು, ಜಮೀನುಗಳಲ್ಲಿ ಸಾಲು ಸಾಲು ಕಳ್ಳತನ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶಗೊಂಡ ರೈತರು ತಕ್ಷಣವೇ ಕಳ್ಳರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
PublicNext
03/11/2026 05:02 pm
LOADING...