ಚಾಮರಾಜನಗರ : ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಆಹಾರ ಇಲಾಖೆ ಹಾಗೂ ತೆರಕಣಾಂಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, 1ಸಾವಿರ ಕೆ.ಜಿ. ಪಡಿತರ ಅಕ್ಕಿ ಮತ್ತು ಸಾಗಾಣಿಕೆಗೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಆಹಾರ ನಿರೀಕ್ಷಕ ಎಂ.ಪಿ.ಅರವಿಂದ್ ನೀಡಿದ ದೂರಿನ ಮೇರೆಗೆ ತೆರಕಣಾಂಬಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಕೆ.ಎಂ.ಮಹೇಶ್ ಅವರು ಸಿಬ್ಬಂದಿಗಳೊಂ ದಿಗೆ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗೇಟ್ ಬಳಿ ದಾಳಿ ನಡೆಸಿದರು.
ಈ ವೇಳೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಸಿಕಂದರ್ ಅಹಮದ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತನಿಂದ ಸುಮಾರು 15 ಸಾವಿರ ರೂ. ಮೌಲ್ಯದ 1ಸಾವಿರ ಕೆ.ಜಿ (20 ಮೂಟೆ) ಪಡಿತರ ಅಕ್ಕಿ ಹಾಗೂ ಮಹೀಂದ್ರಾ ಮ್ಯಾಕ್ಸಿಮೊ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/11/2026 03:59 pm
LOADING...