ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವರಕವಿ ದ.ರಾ.ಬೇಂದ್ರೆ ಮನೆಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ

ಧಾರವಾಡ: ಧಾರವಾಡದ ವರಕವಿ ಡಾ.ದ.ರಾ.ಬೇಂದ್ರೆ ಅವರ ನಿವಾಸಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಭೇಟಿ ನೀಡಿ ಬೇಂದ್ರೆ ಅವರ ಮನೆಯಲ್ಲಿ ಕೆಲಹೊತ್ತು ಕಳೆದಿದ್ದಾರೆ.

ಮಾಜಿ ಮೇಯರ್ ಈರೇಶ ಅಂಚಟಗೇರಿ, ಬಿಜೆಪಿ ಯುವ ಮೋರ್ಚಾದ ಶಕ್ತಿ ಹಿರೇಮಠ ಸೇರಿದಂತೆ ಬಿಜೆಪಿಯ ಇತರ ಕಾರ್ಯಕರ್ತರೊಂದಿಗೆ ಬೇಂದ್ರೆ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದ ತೇಜಸ್ವಿ, ಅಂದು ಬೇಂದ್ರೆ ಅವರಿಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಬೇಂದ್ರೆ ಅವರ ಮೊಮ್ಮಗಳೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ ಅವರು, ಬೇಂದ್ರೆ ಅಜ್ಜನವರ ಮನೆಯನ್ನು ಕೆಲಹೊತ್ತು ಸುತ್ತು ಹಾಕಿ ಎಲ್ಲವನ್ನೂ ವೀಕ್ಷಣೆ ಮಾಡಿದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಬೇಂದ್ರೆ ಅವರ ನಿವಾಸವನ್ನು ಸರ್ಕಾರ ದುರಸ್ತಿಗೊಳಿಸಿ ಮ್ಯೂಸಿಯಂ ರೀತಿಯಲ್ಲಿ ಮಾಡಬೇಕಿತ್ತು. ನಾನೂ ಸಹ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/11/2026 09:00 pm

Cinque Terre

24.13 K

Cinque Terre

0

ಸಂಬಂಧಿತ ಸುದ್ದಿ