ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಮಧ್ಯಂತರ ಚುನಾವಣೆ, ಸೋಲುವ ಭೀತಿಯಲ್ಲಿ ರಿಪಬ್ಲಿಕನ್ಸ್, ಟ್ರಂಪ್ ಕುರ್ಚಿಗೆ ಕಂಟಕ..?

ಅಮೆರಿಕ ರಾಜಕೀಯದಲ್ಲಿ ಮಧ್ಯಂತರ ಚುನಾವಣೆ ಕಾವು ಜೋರಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಭವಿಷ್ಯ ಈ ಚುನಾವಣೆಯ ಮೇಲೆ ನಿಂತಿದೆ. ಅಧ್ಯಕ್ಷರ 4 ವರ್ಷಗಳ ಅಧಿಕಾರಾವಧಿಯ ಅರ್ಧಕ್ಕೆ (2 ವರ್ಷಕ್ಕೆ) ಈ ಚುನಾವಣೆ ನಡೆಯುತ್ತದೆ. ಸಂಸತ್ತಿನ ಕೆಳಮನೆಯಾದ 'ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್'ನ ಎಲ್ಲಾ 435 ಸ್ಥಾನಗಳಿಗೆ ಮತ್ತು ಮೇಲ್ಮನೆಯಾದ 'ಸೆನೆಟ್'ನ 35 ಸ್ಥಾನಗಳಿಗೆ ಮತದಾನ ನಡೆಯುತ್ತದೆ.

ರಿಪಬ್ಲಿಕನ್ ಪಾರ್ಟಿ ಸೋತರೂ ಅಮೆರಿಕ ಸಂವಿಧಾನದ ಪ್ರಕಾರ ಜನವರಿ 20, 2029ರವರೆಗೆ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಆದರೆ, ಡೆಮಾಕ್ರಟ್‌ಗಳು ಮೇಲುಗೈ ಸಾಧಿಸಿದರೆ ದೇಶದಲ್ಲಿ 'ವಿಭಜಿತ ಸರ್ಕಾರ') ಅಸ್ತಿತ್ವಕ್ಕೆ ಬರಲಿದ್ದು, ಟ್ರಂಪ್‌ಗೆ ಕಠಿಣ ಸವಾಲುಗಳು ಎದುರಾಗಲಿವೆ.

ಟ್ರಂಪ್‌ಗೆ 5 ದೊಡ್ಡ ಸವಾಲುಗಳು:

1. ಮಸೂದೆಗಳಿಗೆ ಬ್ರೇಕ್: ತೆರಿಗೆ ಕಡಿತ ಮತ್ತು ಹೊಸ ವಲಸೆ ನೀತಿಗಳಿಗೆ ವಿರೋಧ ಪಕ್ಷದ ತಡೆ.

2. ತನಿಖೆಗಳ ಸುರಿಮಳೆ: ಹಳೆಯ ಫೈಲ್‌ಗಳ ಹೊರತೆಗೆತ ಹಾಗೂ ಸಮನ್ಸ್ ಜಾರಿ.

3. ದೋಷಾರೋಪಣೆ ಭೀತಿ: ಕೆಳಮನೆಯಲ್ಲಿ ಬಹುಮತ ಸಿಕ್ಕರೆ ಟ್ರಂಪ್ ವಿರುದ್ಧ ಇಂಪಿಚ್‌ಮೆಂಟ್ ಅಸ್ತ್ರ ಪ್ರಯೋಗ.

4. ನೇಮಕಾತಿಗಳಿಗೆ ರೆಡ್ ಸಿಗ್ನಲ್: ಫೆಡರಲ್ ಜಡ್ಜ್‌ಗಳು ಹಾಗೂ ಅಧಿಕಾರಿಗಳ ನೇಮಕಾತಿಗೆ ತಡೆ.

5. ಸರ್ಕಾರ ಸ್ಥಗಿತ ಭೀತಿ: ಬಜೆಟ್ ಹಾಗೂ ಸಾಲದ ಮಿತಿ ವಿಚಾರದಲ್ಲಿ ಹಗ್ಗಜಗ್ಗಾಟದಿಂದ ಹಣಕಾಸು ಮುಗ್ಗಟ್ಟು.

ಒಟ್ಟಿನಲ್ಲಿ, ಈ ಚುನಾವಣೆ ಟ್ರಂಪ್ ಪಾಲಿಗೆ 'ಮಾಡು ಇಲ್ಲವೇ ಮಡಿ'ಯಾಗಿದ್ದು, ಮುಂದಿನ ಎರಡು ವರ್ಷಗಳ ಅವರ ಆಡಳಿತದ ದಿಕ್ಕನ್ನು ನಿರ್ಧರಿಸಲಿದೆ.

Edited By :
PublicNext

PublicNext

04/11/2026 04:19 pm

Cinque Terre

10.82 K

Cinque Terre

4

ಸಂಬಂಧಿತ ಸುದ್ದಿ