ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಣದ ಹೊಳೆಗೆ ಮರುಳಾಗದ ಅಮೆರಿಕ ಮತದಾರ: ಟ್ರಂಪ್ ಬೆಂಬಲಿತ ವಿವೇಕ್ ರಾಮಸ್ವಾಮಿಗೆ ಭಾರಿ ಮುಖಭಂಗ

ಅಮೆರಿಕದಲ್ಲಿ ನಡೆಯುತ್ತಿರುವ ಮಧ್ಯಂತರ ಚುನಾವಣೆಯ ಭಾಗವಾಗಿ ಓಹಿಯೋ ಗವರ್ನರ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಹೀನಾಯ ಸೋಲು ಅನುಭವಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಡಾ. ಆಮಿ ಆಕ್ಟನ್ ಭರ್ಜರಿ ಜಯಗಳಿಸಿದ್ದು, ಈ ರಾಜ್ಯದ ಗವರ್ನರ್ ಪಟ್ಟಕ್ಕೇರಿದ ಮೊದಲ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಓಹಿಯೋದಲ್ಲಿ ಗವರ್ನರ್ ಆಗಲು ವಿವೇಕ್ ರಾಮಸ್ವಾಮಿ ತಮ್ಮ ಸ್ವಂತ ಜೇಬಿನಿಂದ ಬರೋಬ್ಬರಿ 36 ಮಿಲಿಯನ್ ಡಾಲರ್ (ಸುಮಾರು 300 ಕೋಟಿ ರೂ.) ನೀರಂತೆ ಖರ್ಚು ಮಾಡಿದ್ದರು. ಆದರೆ ಹಣದ ಹೊಳೆಗೆ ಮತದಾರರು ಮರುಳಾಗಲಿಲ್ಲ. ಕೊನೆಯ ಹಂತದಲ್ಲಿ ಪ್ರತಿಸ್ಪರ್ಧಿ ಆಮಿ ಆಕ್ಟನ್ ತಾಯಿಯನ್ನೇ ಕರೆತಂದು 33 ಕೋಟಿ ರೂ. ವೆಚ್ಚದಲ್ಲಿ ಜಾಹೀರಾತು ನೀಡಿ, ಆಮಿ ಸುಳ್ಳುಗಾರ್ತಿ ಎಂದು ಬಿಂಬಿಸಲು ರಾಮಸ್ವಾಮಿ ಯತ್ನಿಸಿದ್ದರು. ಮಹಿಳೆಯ ಆಂತರಿಕ ನೋವನ್ನು ಬೀದಿಗೆ ತಂದ ಈ ನಡೆಗೆ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತವರು ರಾಜ್ಯವಾಗಿರುವ ಇಲ್ಲಿ, ಸ್ವತಃ ಡೊನಾಲ್ಡ್ ಟ್ರಂಪ್ ಮತ್ತು ವ್ಯಾನ್ಸ್ ಪ್ರಚಾರ ನಡೆಸಿದರೂ ರಾಮಸ್ವಾಮಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

2010ರಿಂದಲೂ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದ್ದ ಓಹಿಯೋದಲ್ಲಿ, ಕಳೆದ 18 ವರ್ಷಗಳಿಂದ ಡೆಮಾಕ್ರಟ್‌ಗಳಿಗೆ ಗೆಲುವು ಸಿಕ್ಕಿರಲಿಲ್ಲ. ಆದರೆ ಕೊರೊನಾ ಕಾಲದ ತಮ್ಮ ಜನಪರ ಸೇವೆ ಹಾಗೂ ಕಾರ್ಮಿಕ ಪರ ಭರವಸೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ 60 ವರ್ಷದ ಡಾ. ಆಮಿ ಆಕ್ಟನ್, ರಾಮಸ್ವಾಮಿ ಅವರ ಧನಬಲ ಮತ್ತು ಕೆಸರೆರಚಾಟದ ರಾಜಕೀಯವನ್ನು ಮಣಿಸಿ ಹೊಸ ದಾಖಲೆ ಬರೆದಿದ್ದಾರೆ.

Edited By :
PublicNext

PublicNext

04/11/2026 04:55 pm

Cinque Terre

19.18 K

Cinque Terre

0

ಸಂಬಂಧಿತ ಸುದ್ದಿ