ಮುಲ್ಕಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಮುಲ್ಕಿ-ಮೂಡುಬಿದಿರೆ ಮಂಡಲದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಟ್ಟದ ಜನಾಂದೋಲನ , ಬೃಹತ್ ಪ್ರತಿಭಟನೆ ಹಾಗೂ ನಮ್ಮಹಕ್ಕಿಗಾಗಿ ನಮ್ಮ ಹೆಜ್ಜೆ;ಬೃಹತ್ ಪಾದಯಾತ್ರೆಯು ಮೈಲೋಟ್ಟಿ ನಿಂದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವರೆಗೆ ನಡೆಯಿತು.
ಬಳಿಕ ಪಂಚಾಯತ್ ಬಳಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಮಾತನಾಡಿ ರಾಜ್ಯದ ಆಡಳಿತದ ಕಾಂಗ್ರೆಸ್ ಸರಕಾರ ಎಲ್ಲಾ ರಂಗದಲ್ಲಿ ವಿಫಲಗೊಂಡಿದೆ. ಸರಕಾರದ ಗ್ಯಾರಂಟಿ ಭಾಗ್ಯಗಳಿಂದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ, ಬೆಲೆ ಏರಿಕೆ ಹಾಗೂ ಲಂಚಗುಳಿತನ, ಅವ್ಯವಹಾರ ಗಳಿಂದ ಸರಕಾರ ಮುಳುಗಿ ಹೋಗಿದ್ದು ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿ ಕಾರಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮತ್ತಷ್ಟು ಪ್ರತಿಭಟನೆಗಳನ್ನು ನಡೆಸುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಈಶ್ವರ ಕಟೀಲು, ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಕಾರ್ಯಕರ್ತರಾದ ಸಾಧು ಅಂಚನ್ ಮಟ್ಟು ಮತ್ತಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್, ಮಾಜೀ ಸದಸ್ಯರಾದ ಕೃಷ್ಣ ಶೆಟ್ಟಿಗಾರ್, ಜೀವನ್ ಶೆಟ್ಟಿ ಅಂಗಾರಗುಡ್ಡೆ,ಪದ್ಮಿನಿ ವಿಜಯ ಶೆಟ್ಟಿ,ಹರೀಶ್ ಶೆಟ್ಟಿ,ಜಯ ಕುಮಾರ್ ಮಟ್ಟುಮತ್ತಿತರರು ಉಪಸ್ಥಿತರಿದ್ದರು ಪ್ರತಿಭಟನೆ ಬಳಿಕ ಅತಿಕಾರಿಬೆಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ರವರಿಗೆ ಮನವಿ ಸಲ್ಲಿಸಲಾಯಿತು.
Kshetra Samachara
04/11/2026 06:35 pm
LOADING...