ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66 ತೆರೆದ ಚರಂಡಿಗೆ ತಾತ್ಕಾಲಿಕ ಮುಚ್ಚುಗಡೆಯ ಪರಿಹಾರ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ನಗರ ಭಾಗದಲ್ಲಿ ಫುಟ್‌ಪಾತ್‌ನಲ್ಲಿ ಹಲವಾರು ಕಡೆಗಳಲ್ಲಿ ತೆರೆದುಕೊಂಡಿರುವ ಚರಂಡಿಯು ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ ಆಗುವ ಭಾರಿ ಅಪಾಯ ಉಂಟಾಗುವ ಕುರಿತು 9 ತಿಂಗಳ ಹಿಂದೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆದು ವರದಿ ಮಾಡಿತ್ತು.

ಬ್ರಹ್ಮಾವರ ಬಸ್ ನಿಲ್ದಾಣದಿಂದ 2 ಭಾಗದಲ್ಲಿ ತಾಲೂಕು ಆಡಳಿತ ಸೌಧ, ಆಕಾಶವಾಣಿ ಬಳಿ, ಧರ್ಮಾವರ ವೃತ್ತ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂಚೆ ಕಚೇರಿ, ಮೆಸ್ಕಾಂ ಸೇರಿದಂತೆ ಅನೇಕ ಕಡೆ ತೆರೆದುಕೊಂಡಿದ್ದು, ಓರ್ವ ವ್ಯಕ್ತಿ ನಿಲ್ಲುವಷ್ಟು ಆಳ ಇದ್ದು ರಾತ್ರಿ ಹೊತ್ತು ಮತ್ತು ಹಗಲಿನಲ್ಲೂ ಅನೇಕರು ಬಿದ್ದು ಕೈ ಕಾಲು ಮುರಿದುಕೊಂಡವರಿದ್ದುದರ ಕುರಿತು ಅಪಾಯದ ಪೂರ್ಣ ಚಿತ್ರಣ ವರದಿ ಮಾಡಿ ಗಮನ ಸೆಳೆಯಲಾಗಿತ್ತು.

ಹೆದ್ದಾರಿ ಪ್ರಾಧಿಕಾರದಲ್ಲಿ ಒಂದೊಂದು ವಿಭಾಗಕ್ಕೆ ಒಂದೊಂದು ಗುತ್ತಿಗೆದಾರರು ಮತ್ತು ನಿರ್ವಹಣೆ ಇರುವ ಕಾರಣ ಹೊಸದಾಗಿ ಅದರ ಮುಚ್ಚಳ ತಯಾರು ಮಾಡುವುದಕ್ಕೆ ಬೇರೆಯೇ ವ್ಯವಸ್ಥೆ ಇರುವ ಕಾರಣ 4 ದಿನದ ಹಿಂದೆ ತೆರೆದುಕೊಂಡಿರುವ ಎಲ್ಲಾ ಕಡೆಯಲ್ಲಿ ಹೊಸ ಮುಚ್ಚಳವನ್ನು ಇರಿಸಲಾಗಿದೆ ಆದರೆ ಅದನ್ನು ಸಮತಟ್ಟುಗೊಳಿಸಿದಲ್ಲಿ ಸಮಸ್ಯೆಗೆ ಪೂರ್ತಿ ಪರಿಹಾರವಾಗಲಿದ್ದು ಅದನ್ನು ಕೂಡಲೇ ಮಾಡಬೇಕಾಗಿದೆ.

ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ

Edited By :
PublicNext

PublicNext

04/11/2026 05:08 pm

Cinque Terre

11.19 K

Cinque Terre

0

ಸಂಬಂಧಿತ ಸುದ್ದಿ