ಬ್ರಹ್ಮಾವರ: ‘ಹಂಗಾರಕಟ್ಟೆಯ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಶ್ರೀಗಳು ಮಠಕ್ಕೆ ಬೀಗ ಹಾಕಿ ಪರಾರಿಯಾಗಿದ್ದು ಭಕ್ತರು ಆತಂಕಗೊಂಡಿದ್ದಾರೆ. ಬುಧವಾರ ಸಂಜೆಯ ನಂತರ ಮಠಕ್ಕೆ ಬೀಗ ಹಾಕಲಾಗಿದೆ.
ಹಂಗಾರಕಟ್ಟೆಯ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಶ್ರೀಗಳು ಪೀಠ ತ್ಯಾಗ ಮಾಡಬೇಕು’ ಎಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿ ಸದಸ್ಯರು ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀಮಠದಲ್ಲಿ ಈ ಹಿಂದಿನ ನೃಸಿಂಹಾಶ್ರಮ ಸ್ವಾಮೀಜಿ ಆಡಳಿತಾವಧಿಯಲ್ಲಿ ದೇವಸ್ಥಾನದ ವ್ಯವಸ್ಥೆಯಲ್ಲಿ ಬದಲಾವಣೆಗಳು ನಡೆದವು. ಈಗಿನ ಸ್ವಾಮೀಜಿಯವರ ಅವಧಿಯಲ್ಲಿ ಇದು ಎಲ್ಲೆ ಮೀರಿದ್ದು, ಮಠದ ಸಂಪ್ರದಾಯಕ್ಕೆ ವಿರುದ್ಧವಾಗಿ ವಿವಿಧ ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
PublicNext
05/11/2026 03:29 pm
LOADING...