ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ : ಹಣ ದುಪ್ಪಟ್ಟು ಆಮಿಷ: ಹೊಟೇಲ್‌ ಉದ್ಯಮಿಗೆ 5.76 ಲಕ್ಷ ವಂಚನೆ

ಕೋಟ : ಹಣವನ್ನು ದುಪ್ಪಟ್ಟು ಮಾಡುವ ಯೋಜನೆಯ ಆಮಿಷವೊಡ್ಡಿ ಹೋಟೆಲ್ ಉದ್ಯಮಿಯಿಂದ ₹5.76 ಲಕ್ಷ ಪಡೆದು ವಂಚಿಸಿದ ಆರೋಪದಡಿ ಮೂವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರದ ವಡೇರ ಹೋಬಳಿಯ ಪ್ರಕಾಶ್ (38) ವಂಚನೆಗೊಳಗಾದವರು. ಅವರಿಗೆ ಬನ್ನೂರು ಗ್ರಾಮದ ಜ್ಯೋತಿ ಎಂಬಾಕೆಯ ಪರಿಚಯವಾಗಿದ್ದು, ಹಣಕಾಸಿನ ವ್ಯವಹಾರ ಹಾಗೂ ಹಣ ದುಪ್ಪಟ್ಟು ಮಾಡುವ ಯೋಜನೆಗಳಿವೆ ಎಂದು ನಂಬಿಸಿದ್ದಳು.

ಆಕೆಯ ಬೇಡಿಕೆಯಂತೆ 2025ರ ಜನವರಿ 21ರಿಂದ ಮೇ 23ರವರೆಗೆ ಸಾಲಿಗ್ರಾಮದ ಅಕ್ಷತಾ ದೇವಾಡಿಗ ಅವರ ಖಾತೆಗೆ ಫೋನ್‌ಪೇ ಮೂಲಕ ಹಂತ ಹಂತವಾಗಿ ₹3.68 ಲಕ್ಷ ವರ್ಗಾಯಿಸಿದ್ದರು.

ಅಲ್ಲದೆ, ಮೈಸೂರಿನ ಪಿರಿಯಾಪಟ್ಟಣದ ಪ್ರಶಾಂತ್ ಎಂಬವರ ಖಾತೆಗೆ ₹58 ಸಾವಿರ ವರ್ಗಾಯಿಸಿದ್ದು, ಜ್ಯೋತಿಯ ಕೋರಿಕೆಯಂತೆ ₹1.50 ಲಕ್ಷ ನಗದು ನೀಡಿದ್ದರು. ಒಟ್ಟು ₹5.76 ಲಕ್ಷ ಹಣವನ್ನು ಆರೋಪಿಗಳು ಪಡೆದುಕೊಂಡಿದ್ದರು. ಇದೀಗ ಹಣವನ್ನು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

05/11/2026 11:38 am

Cinque Terre

2.18 K

Cinque Terre

0

ಸಂಬಂಧಿತ ಸುದ್ದಿ